ಮಹಾರಾಷ್ಟ್ರ ನವನಿರ್ಮಾಣ ಸೇನೆ ತೊರೆದ ವಸಂತ್ ಮೋರೆ ಮುಂಬೈ: ರಾಜ್‌ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆಯ (ಎಂಎನ್‌ಎಸ್‌) ಪುಣೆಯ ಪ್ರಭಾವಿ ನಾಯಕ ವಸಂತ್‌ ಮೋರೆ ಅವರು ಮಂಗಳವಾರ ಪಕ್ಷ ತೊರೆದಿದ್ದಾರೆ. ಆರಂಭದಿಂದಲೂ ಎಂಎನ್‌ಎಸ್‌ ಜತೆಗಿದ್ದ ಅವರು ಪುಣೆಯಲ್ಲಿ ಪಕ್ಷದ ಎಲ್ಲ ಚಟುವಟಿಕೆಗಳಿಗೆ ನೇತೃತ್ವ ವಹಿಸಿದ್ದರು. ‘ಪಕ್ಷದ ಪುಣೆಯ ಕೆಲವು ಪದಾಧಿಕಾರಿಗಳ ಕೆಟ್ಟ ರಾಜಕೀಯದಿಂದ ಬೇಸತ್ತು ಪಕ್ಷದ ಸದಸ್ಯತ್ವ ಮತ್ತು ಎಲ್ಲ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದೇನೆ’ ಎಂದು ರಾಜ್‌ ಠಾಕ್ರೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ. ‘ಮುಂದಿನ ನಿರ್ಧಾರವನ್ನು 3–4 ದಿನಗಳಲ್ಲಿ ತಿಳಿಸುತ್ತೇನೆ’ ಎಂದು ಅವರು ಮಾಧ್ಯಮದವರಿಗೆ ಹೇಳಿದರು. ಆದರೆ, ಬೇರೆ ರಾಜಕೀಯ ಪಕ್ಷ ಸೇರುವ ಅಥವಾ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.