ಒಡಿಶಾ: ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಭುವನೇಶ್ವರ: ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಕೆಲವೇ ದಿನಗಳು ಬಾಕಿ ಇರುವಾಗ ಕಾರ್ಮಿಕರ ಕನಿಷ್ಠ ವೇತನ ಹೆಚ್ಚಳ ಮಾಡಿ ಒಡಿಶಾ ಸರ್ಕಾರ ಆದೇಶ ಹೊರಡಿಸಿದೆ. ದಿನಗೂಲಿ ಕಾರ್ಮಿಕರ ದೈನಂದಿನ ಕನಿಷ್ಠ ವೇತನವನ್ನು ವಿವಿಧ ಪ್ರಮಾಣಗಳಲ್ಲಿ ಹೆಚ್ಚಳ ಮಾಡಲಾಗಿದೆ. ಯಾವುದೇ ಕೌಶಲ್ಯರಹಿತ ಕಾರ್ಮಿಕರ ವೇತನವನ್ನು ದಿನಕ್ಕೆ ₹352ರಿಂದ ₹450ರವರೆಗೆ ಹೆಚ್ಚಿಸಲಾಗಿದ್ದು, ಅರೆ ನುರಿತ ಕಾರ್ಮಿಕರ ವೇತನವನ್ನು ದಿನಕ್ಕೆ ₹392ರಿಂದ ₹500ರವರೆಗೆ ಹೆಚ್ಚಿಸಲಾಗಿದೆ. ನುರಿತ ಕಾರ್ಮಿಕರು ₹442ರಿಂದ ₹550ರವರೆಗೆ ಹಾಗೂ ಹೆಚ್ಚು ಕೌಶಲ್ಯತೆ ಹೊಂದಿರುವ ನೌಕರರು ₹ 502ರಿಂದ ₹600ರವರೆಗೆ ಹೆಚ್ಚಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ವಲಯಗಳಲ್ಲಿ ಕೆಲಸ ಮಾಡುವ ದಿನಗೂಲಿ ಕಾರ್ಮಿಕರು ಈ ಪ್ರಯೋಜನ ಪಡೆಯಬಹುದು ಎಂದು ಮುಖ್ಯಮಂತ್ರಿ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.