ಚುನಾವಣಾ ಬಾಂಡ್: BJPಗೆ ₹6,060.51 ಕೋಟಿ, ಪ್ರಾದೇಶಿಕ ಪಕ್ಷಗಳಿಗೆ ₹5,221 ಕೋಟಿ ನವದೆಹಲಿ: ಬಿಜೆಪಿಯೊಂದೇ ಚುನಾವಣಾ ಬಾಂಡ್‌ಗಳ ಮೂಲಕ ಒಟ್ಟು ₹ 6,060.51 ಕೋಟಿ ದೇಣಿಗೆ ಪಡೆದಿದ್ದರೆ, ಇತರೆ ಎಲ್ಲ ಪ್ರಾದೇಶಿಕ ಪಕ್ಷಗಳು ಒಟ್ಟಾಗಿ ₹ 5,221 ಕೋಟಿ ದೇಣಿಗೆಯನ್ನು ಪಡೆದುಕೊಂಡಿವೆ. ಚುನಾವಣಾ ಆಯೋಗವು ಹಂಚಿಕೊಂಡಿರುವ ಚುನಾವಣಾ ಬಾಂಡ್‌ ಕುರಿತ ವಿವರಗಳ ಪ್ರಕಾರ, 2019ರ ಏಪ್ರಿಲ್‌ನಿಂದ 2024ರ ಜನವರಿ ನಡುವಿನ ಅವಧಿಯಲ್ಲಿ ಈ ಮೊತ್ತದ ದೇಣಿಗೆ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿದೆ. ರಾಷ್ಟ್ರೀಯ ಪಕ್ಷಗಳಾಗಿರುವ ಬಿಎಸ್‌ಪಿ, ಸಿಪಿಎಂ ಮತ್ತು ಎನ್‌ಪಿಪಿ ಚುನಾವಣಾ ಬಾಂಡ್‌ಗಳ ಮೂಲಕ ಯಾವುದೇ ದೇಣಿಗೆಯನ್ನು ಸ್ವೀಕರಿಸಿಲ್ಲ. ಕರ್ನಾಟಕದ ಜೆಡಿಎಸ್ ಪಕ್ಷ ₹ 43.40 ಕೋಟಿ ದೇಣಿಗೆ ಪಡೆದಿದೆ. ಉಳಿದಂತೆ ಪಕ್ಷಾವಾರು ದೇಣಿಗೆಗಳ ವಿವರ ಹೀಗಿದೆ. ದೇಣಿಗೆ: ಯಾವ ಪಕ್ಷಕ್ಕೆ ಎಷ್ಟು? (ಮೊತ್ತ ಕೋಟಿ ರೂಪಾಯಿಗಳಲ್ಲಿ) ಬಿಜೆಪಿ;₹6,060.51 ಕಾಂಗ್ರೆಸ್‌;₹1,421.86 ಆಮ್ ಆದ್ಮಿ ಪಕ್ಷ (ಎಎಪಿ);₹65.45 ತೃಣಮೂಲ ಕಾಂಗ್ರೆಸ್‌;₹1,606.53 ಭಾರತ್‌ ರಾಷ್ಟ್ರ ಸಮಿತಿ;₹1,214.70 ಬಿಜೆಡಿ;₹775.50 ಡಿಎಂಕೆ;₹639 ವೈಎಸ್‌ಆರ್‌ಸಿಪಿ;₹337 ತೆಲುಗುದೇಶಂ ಪಕ್ಷ;₹218.88 ಶಿವಸೇನಾ;₹159.38 ಆರ್‌ಜೆಡಿ;₹73.5 ಜೆಡಿಎಸ್‌;₹43.40 ಸಿಕ್ಕಿಂ ಕ್ರಾಂತಿದಳ;₹36.5 ಎನ್‌ಸಿಪಿ;₹31 ಜನಸೇವಾ ಪಾರ್ಟಿ;₹21 ಸಮಾಜವಾದಿ ಪಕ್ಷ;₹14.05 ಜೆಡಿಯು;₹14 ಜೆಎಂಎಂ;₹13.5 ಅಕಾಲಿದಳ;₹7.2 ಎಐಎಡಿಎಂಕೆ;₹6.05 ಸಿಕ್ಕಿಂ ಪ್ರಜಾಸತ್ತಾತ್ಮಕ ರಂಗ;₹5.5 ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ;₹01 ನ್ಯಾಷನಲ್‌ ಕಾನ್ಫರೆನ್ಸ್;₹01 ಗೋವಾ ಫಾರ್ವರ್ಡ್‌;₹01 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.