ಆಕ್ಷೇಪಾರ್ಹ, ಅಶ್ಲೀಲ ಕಾರ್ಯಕ್ರಮ ಪ್ರಸಾರ: 18 ಒಟಿಟಿ ವೇದಿಕೆಗಳಿಗೆ ನಿರ್ಬಂಧ ನವದೆಹಲಿ: ಆಕ್ಷೇಪಾರ್ಹ ಮತ್ತು ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡಿರುವ ಕಾರಣಕ್ಕೆ 18 ಒಟಿಟಿ ವೇದಿಕೆಗಳಿಗೆ ಕೇಂದ್ರ ಸರ್ಕಾರವು ಗುರುವಾರ ನಿರ್ಬಂಧ ಹೇರಿದೆ. 18 ಒಟಿಟಿ ವೇದಿಕೆಗಳ ಜೊತೆಗೆ 19 ವೆಬ್‌ಸೈಟ್‌ಗಳು, 10 ಆ್ಯಪ್‌ಗಳು (ಏಳು ಗೂಗಲ್‌ ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಆ್ಯಪ್‌ಗಳು ಮತ್ತು ಮೂರು ಆ್ಯಪಲ್‌ ಆ್ಯಪ್‌ ಸ್ಟೋರ್‌ನಲ್ಲಿ ಇರುವಂಥವು) ಮತ್ತು 57 ಸಾಮಾಜಿಕ ಮಾಧ್ಯಮ ಖಾತೆಗಳಿಗೂ ನಿರ್ಬಂಧ ಹೇರಲಾಗಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಹೇಳಿಕೆ ತಿಳಿಸಿದೆ. ಸೃಜನಶೀಲತೆಯ ನೆಪದಲ್ಲಿ ಒಟಿಟಿ ವೇದಿಕೆಗಳು ಅಶ್ಲೀಲ ಕಾರ್ಯಕ್ರಮಗಳನ್ನು ಪ್ರಸಾರ ಮಾಡಬಾರದು ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್‌ ಠಾಕೂರ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.