ಒಡಿಶಾ ವಿಧಾನಸಭೆ ಚುನಾವಣೆ: ಮೇ 13ರಿಂದ ನಾಲ್ಕು ಹಂತಗಳಲ್ಲಿ ಮತದಾನ ಭುವನೇಶ್ವರ: ಒಡಿಶಾದಲ್ಲಿ ವಿಧಾನಸಭೆ ಚುನಾವಣೆಯು ನಾಲ್ಕು ಹಂತಗಳಲ್ಲಿ ನಡೆಯಲಿದೆ ಎಂದು ಚುನಾವಣೆ ಆಯೋಗ ಶನಿವಾರ ಘೋಷಣೆ ಮಾಡಿದೆ. ಮೇ 13ರಂದು ಮೊದಲ ಹಂತ, ಮೇ 20ರಂದು ಎರಡನೇ ಹಂತ, ಮೇ 25ರಂದು ಮೂರನೇ ಹಂತ ಹಾಗೂ ಜೂನ್‌ 1ರಂದು ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ. ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.