ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪ್ರಾರ್ಥನೆಗೆ ನಿರಾಕರಣೆ ನವದೆಹಲಿ: ಇತ್ತೀಚೆಗೆ ಕೆಡವಲಾಗಿದ್ದ ಮೆಹ್ರೌಲಿಯ ಅಖೂಂದ್‌ಜಿ ಮಸೀದಿಯಲ್ಲಿ ಪವಿತ್ರ ರಂಜಾನ್‌ ತಿಂಗಳ ಪ್ರಾರ್ಥನೆ ಸಲ್ಲಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್‌ ವಜಾ ಮಾಡಿದೆ. ಮುಂತಾಜ್ಮಿಯಾ ಕಮಿಟಿ ಮದರಸಾ ಬೆಹ್ರುಲ್ ಉಲುಮ್‌ ಆ್ಯಂಡ್ ಕಬರಸ್ತಾನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಚಿನ್‌ ದತ್ತಾ ಅವರು ವಜಾ ಮಾಡಿದ್ದು, ‘ಶಬ್‌–ಎ– ಬರಾತ್‌ ಸಂದರ್ಭದಲ್ಲಿಯೂ ಈ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಲು ಭಕ್ತರಿಗೆ ಕಳೆದ ತಿಂಗಳು ಈ ನ್ಯಾಯಾಲಯವು ಅವಕಾಶ ನೀಡಿರಲಿಲ್ಲ. ಅದೇ ರೀತಿ, ಈ ಮನವಿಗೆ ಸಂಬಂಧಿಸಿದಂತೆ ಬೇರೆ ದೃಷ್ಟಿಕೋನದಲ್ಲಿ ಯೋಚಿಸಿ ನಿರ್ಧರಿಸಲು ಯಾವ ಸಮರ್ಥನೆಯೂ ಕಾಣುತ್ತಿಲ್ಲ’ ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.