<.... (="4003f7db2c4cad014f708d7d69f37697", =".58900D8624C4B350C3F1EF6024F04673..E438549DC9DBBE5A52B1449024C3DC9F..30293")> ಬೆಂಗಳೂರು: ಮಲತಾಯಿಯೊಬ್ಬರು ಮಗಳಿಗೆ ಮನಸೋಇಚ್ಛೆ ಥಳಿಸಿರುವ ಘಟನೆ ಮಧ್ಯಪ್ರದೇಶದ ರತ್ಲಾಮ್ ಜಿಲ್ಲೆಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. : 4.86% . . . . ಯುವತಿಗೆ ಥಳಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ತಂದೆ–ತಾಯಿಯಿಂದ ಬೇರ್ಪಟ್ಟಿರುವ ಯುವತಿ ತನ್ನ ತಂದೆ ಕಡೆಯ ಸಂಬಂಧಿ ಚಿಕ್ಕಮ್ಮಳ ಜೊತೆ ವಾಸ ಮಾಡುತ್ತಿದ್ದರು. ಈ ವೇಳೆ ಕೌಟುಂಬಿಕ ಕಲಹದ ಕಾರಣಕ್ಕೆ ಯುವತಿಗೆ ಆಕೆಯ ಚಿಕ್ಕಮ್ಮ ಕೆಳಕ್ಕೆ ಬೀಳಿಸಿ ಅಮಾನುಷವಾಗಿ ಥಳಿಸಿದ್ದಾರೆ. ಯುವತಿಯ ಮೇಲೆ ಹಲ್ಲೆ ನಡೆಸುವಾಗ ‘ವಿಡಿಯೊ ಮಾಡು, ನನಗೇನು ಸಮಸ್ಯೆ ಇಲ್ಲ‘ ಎಂದು ಹೇಳಿದ್ದಾರೆ. ಹಲ್ಲೆ ನಡೆಸಿರುವ ಮಹಿಳೆಯನ್ನು ಪೂಜಾ ಎಂದು ಗುರುತಿಸಲಾಗಿದೆ. ಈ ಕುರಿತು ‍ಪ್ರಕರಣ ದಾಖಲಿಸಿಕೊಂಡಿರುವ ರತ್ಲಾಮ್ ಜಿಲ್ಲೆಯ ಪೊಲೀಸರು ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.