<.... (="4003f7db2c4cad014f708d7d69f37697", =".58900D8624C4B350C3F1EF6024F04673..BA790040EBFDDAB6CFE0F03CA78D0F9F..24348")> ನವದೆಹಲಿ: ಆಯಾ ರಾಜ್ಯಗಳ ಸಂಪ್ರದಾಯಗಳಿಗೆ ತಕ್ಕಂತೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ವಸ್ತ್ರ ಸಂಹಿತೆ ರೂಪಿಸುವಂತೆ ಅಧೀನ ಸಂಸ್ಥೆಗಳಿಗೆ ಕೇಂದ್ರದ ಆರೋಗ್ಯ ಸಚಿವಾಲಯ ಸೂಚಿಸಿದೆ. : 3.39% . . . . ಸದ್ಯ, ಘಟಿಕೋತ್ಸವಗಳಲ್ಲಿ ಬಳಸುತ್ತಿರುವ ಕಪ್ಪು ನಿಲುವಂಗಿ ಮತ್ತು ಟೋಪಿಯು ವಸಾಹತುಶಾಹಿ ಪರಂಪರೆಯಾಗಿದ್ದು, ಅದನ್ನು ಬದಲಿಸಬೇಕು ಎಂದು ಹೇಳಿದೆ. ಈ ಉಡುಪು ಯುರೋಪ್‌ನಲ್ಲಿ ಮಧ್ಯಯುಗದಲ್ಲಿ ಹುಟ್ಟಿಕೊಂಡಿತು. ಬ್ರಿಟಿಷರು ತಮ್ಮ ಎಲ್ಲಾ ವಸಾಹತುಗಳಲ್ಲಿ ಅದನ್ನು ಪರಿಚಯಿಸಿದರು ಎಂದು ಅದು ಹೇಳಿದೆ. ‘ಸರ್ಕಾರ ಕೈಗೊಂಡಿರುವ ನಿರ್ಧಾರದಂತೆ ಸಚಿವಾಲಯದ ಅಡಿಯಲ್ಲಿ ಬರುವ ಎಐಐಎಂಎಸ್/ಐಎನ್‌ಐಗಳು ಸೇರಿದಂತೆ ವೈದ್ಯಕೀಯ ಶಿಕ್ಷಣ ನೀಡುವ ಎಲ್ಲ ಸಂಸ್ಥೆಗಳು ಇರುವ ರಾಜ್ಯಗಳ ಸಂಪ್ರದಾಯಗಳ ಆಧಾರದ ಮೇಲೆ ಘಟಿಕೋತ್ಸವಗಳಿಗೆ ಭಾರತೀಯ ಸಂಸ್ಕೃತಿ ಬಿಂಬಿಸುವ ಸೂಕ್ತ ವಸ್ತ್ರ ಸಂಹಿತೆ ರೂಪಿಸಬೇಕು’ಎಂದು ಪ್ರಕಟಣೆ ತಿಳಿಸಿದೆ. ಈ ಸಂಬಂಧ ಸಂಸ್ಥೆಗಳು ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆಯುವಂತೆ ಸಚಿವಾಲಯ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.