<.... (="4003f7db2c4cad014f708d7d69f37697", =".58900D8624C4B350C3F1EF6024F04673..39611047500DDF9309160FD58610C916..18988")> ಬೆಂಗಳೂರು: ಎಕ್ಸ್‌ಚೇಂಜ್ ಫಾರ್ ಮೀಡಿಯಾ (ಇಫೋರ್‌ಎಂ) ಸಂಸ್ಥೆಯು ನೀಡುವ ಇಂಡಿಯನ್ ಮಾರ್ಕೆಂಟಿಗ್ ಅವಾರ್ಡ್ಸ್‌– 2024 (ಐಎಂಎ–ಸೌಥ್)ನ ಎರಡು ವಿಭಾಗಗಳಲ್ಲಿ ‘ಪ್ರಜಾವಾಣಿ’ ಮತ್ತು ‘ಡೆಕ್ಕನ್ ಹೆರಾಲ್ಡ್’ ಪ್ರಶಸ್ತಿಗೆ ಭಾಜನವಾಗಿವೆ. ನಗರದ ಎಂ.ಜಿ.ರಸ್ತೆಯ ತಾಜ್ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. : 3.33% . . . . ಬ್ರಾಂಡ್ ಎಕ್ಸ್‌ಟೆನ್‌ಷನ್ ಮೀಡಿಯಾ ವಿಭಾಗದಲ್ಲಿ ‘ಪ್ರಜಾವಾಣಿ–ಡೆಕ್ಕನ್ ಹೆರಾಲ್ಡ್‌’ನ ‘ಭೂಮಿಕಾ ಕ್ಲಬ್‌’ಗೆ ಬೆಳ್ಳಿ ವಿಭಾಗದಲ್ಲಿ ಪ್ರಶಸ್ತಿ ಸಂದರೆ, ‘ಡೆಕ್ಕನ್ ಹೆರಾಲ್ಡ್‌’ನ ‘ಡಿಎಚ್‌–ಬೆಂಗಳೂರು–2040 ಸಮ್ಮಿಟ್’ಗೆ ಬಂಗಾರ ವಿಭಾಗದಲ್ಲಿ ಪ್ರಶಸ್ತಿ ಸಂದಿದೆ. ಈ ಪ್ರಶಸ್ತಿಗಳಿಗಾಗಿ 400ಕ್ಕೂ ಹೆಚ್ಚು ನಾಮನಿರ್ದೇಶನಗಳಿದ್ದವು. ಮಾರ್ಕೆಟಿಂಗ್ ವಿಭಾಗದಲ್ಲಿ ವಿನೂತನ, ವಿಭಿನ್ನ ರೀತಿಯಲ್ಲಿ ಕೆಲಸ ಮಾಡಿದವರಿಗೆ ಈ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.