<.... (="4003f7db2c4cad014f708d7d69f37697", =".58900D8624C4B350C3F1EF6024F04673..54735B66D3B23D91E881D5040BB00060..14156")> ಅಯೋಧ್ಯೆ: ಜನವರಿ 22ರಂದು ಅಯೋಧ್ಯೆಯಲ್ಲಿ ನಡೆದ ಬಾಲರಾಮನ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಬರೋಬ್ಬರಿ ₹113 ಕೋಟಿ ಖರ್ಚಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮಾಹಿತಿ ನೀಡಿರುವುದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. : 3.39% . . . . ರಾಮ ಮಂದಿರ ನಿರ್ಮಾಣಕ್ಕೆ ಈವರೆಗೆ ₹1,800 ಕೋಟಿ ಖರ್ಚಾಗಿದ್ದು, ಈ ವರ್ಷದ ಅಂತ್ಯದ ವೇಳೆಗೆ ಮುಂದಿನ ಎರಡು ಹಂತಗಳ ಕಾಮಗಾರಿಗೆ ಹೆಚ್ಚುವರಿ ₹670 ಕೋಟಿ ಖರ್ಚಾಗಲಿದೆ ಎಂದೂ ಇತ್ತೀಚಿನ ಸಭೆಯೊಂದರಲ್ಲಿ ಬಹಿರಂಗಪಡಿಸಿತ್ತು. 2023-24ನೇ ಹಣಕಾಸು ವರ್ಷದ ಖರ್ಚು ವೆಚ್ಚಗಳ ಕುರಿತಂತೆಯೂ ಟ್ರಸ್ಟಿಗಳು ಪರಿಶೀಲನೆ ನಡೆಸಲಿದ್ದು, ಸೆಪ್ಟೆಂಬರ್‌ನಲ್ಲಿ ಟ್ರಸ್ಟ್‌ ಆದಾಯ ತೆರಿಗೆ ಸಲ್ಲಿಕೆ ಮಾಡಲಿದೆ. ಕಳೆದ 4 ವರ್ಷಗಳಲ್ಲಿ ಭಕ್ತರು 20 ಕೆ.ಜಿ ಚಿನ್ನ, 13 ಕ್ವಿಂಟಲ್ ಬೆಳ್ಳಿಯ ಆಭರಣಗಳನ್ನು ದೇಗುಲಕ್ಕೆ ನೀಡಿದ್ದಾರೆ. 2024ರ ಏಪ್ರಿಲ್ 1 ರಿಂದ 2025ರ ಮಾರ್ಚ್ 31ರವರೆಗೆ ₹850 ಕೋಟಿ ಖರ್ಚನ್ನು ಅಂದಾಜಿಸಲಾಗಿದೆ ಎಂದು ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.