ಕೇರಳದಲ್ಲಿ ಮುಂದುವರಿದ ಬಿಸಿಗಾಳಿ ಸ್ಥಿತಿ: 3 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್‌ ತಿರುವನಂತಪುರ: ಕೇರಳದಲ್ಲಿ ಬಿಸಿಗಾಳಿಯ ಸ್ಥಿತಿ ಮುಂದುವರಿದಿದ್ದು ಮೂರು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಯೆಲ್ಲೊ ಅಲರ್ಟ್‌ ಘೋಷಣೆ ಮಾಡಿದೆ. ತಿರುವನಂತಪುರ, ಆಲಪ್ಪುಳ ಮತ್ತು ಕೊಯಿಕ್ಕೋಡ್‌ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್‌ ತಲುಪುವ ಸಾಧ್ಯತೆ ಇರುವ ಕಾರಣ ನಾಳೆಯವರೆಗೆ (ಮೇ.9) ಯೆಲ್ಲೊ ಅಲರ್ಟ್‌ ಘೋಷಣೆ ಮಾಡಲಾಗಿದೆ. ಉಳಿದಂತೆ, ಎರ್ನಾಕುಲಂ, ತ್ರಿಶೂರ್, ಕಣ್ಣೂರು, ಕಾಸರಗೋಡಿನಲ್ಲಿ ಮೇ 10ರವರೆಗೂ ತಾಪಮಾನ ಏರಿಕೆಯಾಗುವ ಸಂಭವವಿದೆ. ಗುಡ್ಡಗಾಡು ಪ್ರದೇಶ ಹೊರತುಪಡಿಸಿ ಉಳಿದೆಡೆ ರಾತ್ರಿಯೂ ಬಿಸಿ ಮತ್ತು ಆರ್ದೃ ವಾತಾವರಣ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.