ಪತ್ನಿ ಮೂಕಿಯಾಗಿದ್ದಕ್ಕೆ ತನ್ನ ನಾಲಿಗೆ ಕತ್ತರಿಸಿ ದೇವಿಗೆ ಸಮರ್ಪಿಸಿದ ವ್ಯಕ್ತಿ! ದುರ್ಗ್, ಛತ್ತೀಸ್‌ಗಢ: ಭಕ್ತಿಯ ಪರವಶನಾಗಿ ವ್ಯಕ್ತಿಯೊಬ್ಬ ತನ್ನ ನಾಲಿಗೆಯನ್ನು ಕತ್ತರಿಸಿ ದೇವರಿಗೆ ಸಮರ್ಪಿಸಿದ ಘಟನೆ ಛತ್ತೀಸ್‌ಗಢದ ದುರ್ಗ್ ಜಿಲ್ಲೆಯಲ್ಲಿ ನಡೆದಿರುವುದಾಗಿ ವರದಿಯಾಗಿದೆ. ರಾಜೇಶ್ವರ್ ನಿಶ್ವದ್ (40) ಎಂಬ ವ್ಯಕ್ತಿಯೇ ನಾಲಿಗೆ ಕತ್ತರಿಸಿಕೊಂಡ ನತದೃಷ್ಟ. ಅಂಜೋರಾ ಪೊಲೀಸ್ ಠಾಣೆ ವ್ಯಾಪ್ತಿಯ ಥಾನೌದ್ ಎಂಬ ಹಳ್ಳಿಯ ರಾಜೇಶ್ವರ್, ಬುಧವಾರ ಕೆರೆಯೊಂದರ ಬಳಿ ಇರುವ ದೆವಸ್ಥಾನಕ್ಕೆ ಹೋಗಿ ಮಂತ್ರ ಪಠಿಸಿ ಹರಿತವಾದ ಚಾಕುವಿನಿಂದ ನಾಲಿಗೆ ಕತ್ತರಿಸಿಕೊಂಡಿದ್ದಾನೆ. ತನ್ನ ಪತ್ನಿ ಮೂಕಿಯಾಗಿರುವುದಕ್ಕೆ ಮನನೊಂದು ರಾಜೇಶ್ವರ್ ದೇವಿಗೆ ನಾಲಿಗೆಯನ್ನು ಸಮರ್ಪಿಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ರಕ್ತಸ್ರಾವದಿಂದ ತೀವ್ರ ಗಾಯಗೊಂಡಿರುವ ರಾಜೇಶ್ವರ್‌ನನ್ನು ದುರ್ಗ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಅಂಜೋರಾ ಪೊಲೀಸ್ ಠಾಣಾಧಿಕಾರಿ ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.