| ಕೇದಾರನಾಥ, ಗಂಗೋತ್ರಿ ದೇವಾಲಯ ಭಕ್ತರಿಗೆ ಮುಕ್ತ ಕೇದಾರನಾಥ ಮತ್ತು ಯಮುನೋತ್ರಿ ದೇವಾಲಯಗಳನ್ನು ಬೆಳಿಗ್ಗೆ 7 ಗಂಟೆಗೆ ತೆರೆಯಲಾಯಿತು. ಗಂಗೋತ್ರಿ ದೇವಾಲಯವನ್ನು ಮಧ್ಯಾಹ್ನ 12.20ಕ್ಕೆ ತೆರೆಯಲಾಯಿತು. ಚಿತ್ರ ಕೃಪೆ: ಪಿಟಿಐ ಕೇದಾರನಾಥ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಚಿತ್ರ ಕೃಪೆ: ಪಿಟಿಐ ದೇವಾಲಯದ ಮುಂದಿರುವ ನಂದಿ ವಿಗ್ರಹಕ್ಕೆ ನಮಸ್ಕರಿಸುತ್ತಿರುವ ಸಿಎಂ ಪುಷ್ಕರ್ ಸಿಂಗ್ ಧಾಮಿ ಚಿತ್ರ ಕೃಪೆ: ಪಿಟಿಐ ಚಿತ್ರ ಕೃಪೆ: ಪಿಟಿಐ ದೇವಾಲಯಕ್ಕೆ ಬಂದಿದ್ದ ಭಕ್ತಾದಿಗಳೊಂದಿಗೆ ಸಿಎಂ ಪುಷ್ಕರ್ ಸಿಂಗ್ ಧಾಮಿ ಚಿತ್ರ ಕೃಪೆ: ಪಿಟಿಐ ದೇವಾಲಯಗಳ ದ್ವಾರಗಳನ್ನು ತೆಗೆಯುವುದನ್ನು ಸುಮಾರು 10,000 ಭಕ್ತಾದಿಗಳು ಕಣ್ತುಂಬಿಕೊಂಡರು ಚಿತ್ರ ಕೃಪೆ: ಪಿಟಿಐ ಸುಮಾರು 20 ಕ್ವಿಂಟಾಲ್‌ಗೂ ಹೆಚ್ಚು ಬಗೆಯ ಹೂವುಗಳಿಂದ ದೇವಸ್ಥಾನವನ್ನು ಅಲಂಕರಿಸಲಾಗಿತ್ತು. ಚಿತ್ರ ಕೃಪೆ: ಪಿಟಿಐ ಹಿಮಾಲಯದ ಗಢವಾಲ್ ಪರ್ವತ ಶ್ರೇಣಿಗಳಲ್ಲಿರುವ ಈ ದೇವಾಲಯಗಳನ್ನು ಪ್ರತಿವರ್ಷ ಚಳಿಗಾಲ ಆರಂಭವಾದ ನಂತರ ಮುಚ್ಚಲಾಗುತ್ತದೆ. ಬೇಸಿಗೆ ಆರಂಭಗೊಂಡ ನಂತರ ಮತ್ತೆ ದರ್ಶನಕ್ಕೆ ಮುಕ್ತಗೊಳಿಸಲಾಗುತ್ತದೆ. ಚಿತ್ರ ಕೃಪೆ: ಪಿಟಿಐ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.