| ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗಾಗುತ್ತೆ..: ಮನೋಜ್ ಝಾ 75 ವರ್ಷ ವಯಸ್ಸಿನ ನಂತರವೂ ನರೇಂದ್ರ ಮೋದಿಯವರೇ ಪ್ರಧಾನಿಯಾಗಿ ಮುಂದುವರಿಯಲಿದ್ದಾರೆ ಎಂದು ಹೇಳಿಕೆ ನೀಡಿದ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಆರ್‌ಜೆಡಿ ನಾಯಕ ಮನೋಜ್‌ ಝಾ, ‘ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾದಾಗ ಹೀಗೆಲ್ಲ ಆಗುತ್ತದೆ’ ಎಂದು ಕುಟುಕಿದ್ದಾರೆ. ಎಲ್.ಕೆ. ಅಡ್ವಾಣಿ, ಮುರಳಿ ಮನೋಹರ ಜೋಶಿಯವರಂಥವರು ವಯಸ್ಸಿನ ಕಾರಣದಿಂದ ನಿವೃತ್ತರಾಗಬೇಕು, ಮೋದಿ ಪ್ರಧಾನಮಂತ್ರಿ ಹುದ್ದೆಯಿಂದ ನಿವೃತ್ತರಾಗುವುದಿಲ್ಲ. ಏಕೆಂದರೆ, ಇಲ್ಲಿ ಪಕ್ಷಕ್ಕಿಂತ ವ್ಯಕ್ತಿಯೇ ದೊಡ್ಡವರಾಗಿದ್ದಾರೆ’ ಎಂದು ಝಾ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.