ಪ್ಲಾಸ್ಮಾ ಕಳ್ಳತನ: ಲ್ಯಾಬ್‌ ಟೆಕ್ನೀಷಿಯನ್‌ ಬಂಧನ ಜೈಪುರ: ರಾಜಸ್ಥಾನದ ಜೈಪುರದಲ್ಲಿರುವ ಜೆಕೆ ಲೋನ್‌ ಸರ್ಕಾರಿ ಆಸ್ಪತ್ರೆಯಿಂದ ಪ್ಲಾಸ್ಮಾ ಪ್ಯಾಕ್‌ಗಳನ್ನು ಕದ್ದ ಆರೋಪದ ಮೇಲೆ ಲ್ಯಾಬ್‌ ಟೆಕ್ನೀಷಿಯನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಕಿಶನ್‌ ಸಹಾಯ್‌ ಕಟಾರಿಯಾ, ಇದೇ ಜೆ.ಕೆ. ಲೋನ್‌ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಲ್ಯಾಬ್‌ ಟೆಕ್ನೀಷಿಯನ್‌ ಆಗಿ ಕಾರ್ಯನಿರ್ವಹಿಸುತ್ತಿದ್ದ ಎಂದು ಡಿಸಿಪಿ ಕಾವೇಂದ್ರ ಸಾಗರ್‌ ತಿಳಿಸಿದ್ದಾರೆ. ರಕ್ತನಿಧಿ ಕೇಂದ್ರದ ಉಸ್ತುವಾರಿಯಾಗಿರುವ ಡಾ.ಸತ್ಯೇಂದ್ರ ಚೌಧರಿ ಅವರು ಲ್ಯಾಬ್‌ ಟೆಕ್ನೀಷಿಯನ್‌ ಕಿಶನ್‌ ಸಹಾಯ್‌ 76 ಪ್ಲಾಸ್ಮಾ ಪ್ಯಾಕ್‌ಗಳನ್ನು ಕಳ್ಳತನ ಮಾಡಿರುವುದಾಗಿ ಇದೇ 6ರಂದು ಪೊಲೀಸ್‌ ದೂರು ದಾಖಲಿಸಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.