ಖಾಲಿಸ್ತಾನ ಪರ ಗೋಡೆ ಬರಹ: ಮೂವರ ಬಂಧನ ಚಂಡೀಗಢ: ಪಂಜಾಬ್‌ನ ಬಠಿಂಡಾ ಮತ್ತು ದೆಹಲಿಯಲ್ಲಿ ಖಾಲಿಸ್ತಾನ ಪರ ಘೋಷಣೆಗಳನ್ನು ಬರೆದ ಆರೋಪದ ಮೇರೆಗೆ ನಿಷೇಧಿತ ‘ಸಿಖ್ ಫಾರ್ ಜಸ್ಟೀಸ್’ ಸಂಘಟನೆಯ ಮೂವರನ್ನು ಪಂಜಾಬ್ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ. ಗುಪ್ತಚರ ದಳದ ಘಟಕ ಹಾಗೂ ಬಠಿಂಡಾ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಮೂವರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದರು. ಏಪ್ರಿಲ್ 27ರಂದು ಬಠಿಂಡಾದ ನ್ಯಾಯಾಲಯ ಹಾಗೂ ಜಿಲ್ಲಾ ಆಡಳಿತದ ಆವರಣಗಳಲ್ಲಿರುವ ಗೋಡೆಗಳ ಮೇಲೆ ಖಾಲಿಸ್ತಾನ ಪರ ಘೋಷಣೆಗಳನ್ನು ಬರೆಯಲಾಗಿತ್ತು. ಅಲ್ಲದೆ, ಮೇ 9ರಂದು ಇದೇ ರೀತಿಯ ಘೋಷಣೆಗಳು ದೆಹಲಿಯ ಝಂಡೆವಾಲಾನ್ ಮತ್ತು ಕರೋಲ್ ಬಾಗ್ ಮೆಟ್ರೊ ನಿಲ್ದಾಣಗಳಲ್ಲೂ ಕಂಡುಬಂದಿದ್ದವು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.