ಲೈಂಗಿಕ ದೌರ್ಜನ್ಯ | ಪ್ರಜ್ವಲ್ ರೇವಣ್ಣನನ್ನು ಜರ್ಮನಿಯಿಂದ ಕರೆತನ್ನಿ: ಕಾಂಗ್ರೆಸ್ ಮುಂಬೈ: ಲೈಂಗಿಕ ದೌರ್ಜನ್ಯ ಆರೋಪ ಕೇಳಿಬಂದ ನಂತರ ವಿದೇಶಕ್ಕೆ ಪರಾರಿಯಾಗಿರುವ ಸಂಸದ ಪ್ರಜ್ವಲ್‌ ರೇವಣ್ಣ ಅವರನ್ನು ವಾಪಸ್‌ ಕರೆತರಲು ಸಾಧ್ಯವಾದ ಎಲ್ಲಾ ಪ್ರಯತ್ನ ಮಾಡಿ ಎಂದು ಕಾಂಗ್ರೆಸ್‌ ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಒತ್ತಾಯಿಸಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್‌ ಮಹಿಳಾ ಘಟಕದ ಅಧ್ಯಕ್ಷೆ ಅಲ್ಕಾ ಲಂಬಾ ಅವರು, ‘ಮೇ 15 ಮತ್ತು 17ರಂದು ಮುಂಬೈನಲ್ಲಿ ನಡೆಯಲಿರುವ ರ‍್ಯಾಲಿ ವೇಳೆ ಮೋದಿ ಅವರಿಗೆ ಕಪ್ಪು ಬಾವುಟ ತೋರಿಸುತ್ತೇವೆ ಎಂದು ಹೇಳಿದರು. ‘ಪ್ರಜ್ವಲ್‌ ರೇವಣ್ಣ ಅವರನ್ನು ದೇಶಕ್ಕೆ ಕರೆತಂದು ಕರ್ನಾಟಕ ಸರ್ಕಾರಕ್ಕೆ ಒಪ್ಪಿಸಲೇಬೇಕು’ ಎಂದು ಆಗ್ರಹಿಸಿದರು. ‘ಪ್ರಧಾನಿ ಮತ್ತು ಬಿಜೆಪಿ ನಾಯಕರ ಮೌನವು ಅವರಿಗೆ ಬೆಂಬಲ ನೀಡುವಂತಿದೆ. ಕೇಂದ್ರ ಸರ್ಕಾರವು ಜರ್ಮನಿ ಜೊತೆ ಮಾತುಕತೆ ನಡೆಸಬೇಕು’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.