ಕೊಲೆ ಯತ್ನ ಪ್ರಕರಣ: ಪೊಲೀಸರ ವಿರುದ್ಧ ಕೋರ್ಟ್‌ಗೆ ಮಾಜಿ ನ್ಯಾಯಮೂರ್ತಿ ದೂರು ಕೋಲ್ಕತ್ತ: ‘ನನ್ನ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲು ಪೊಲೀಸರು ಅತ್ಯುತ್ಸಾಹ ತೋರಿದ್ದಾರೆ’ ಎಂದು ದೂರಿ ಮಾಜಿ ನ್ಯಾಯಮೂರ್ತಿ, ಲೋಕಸಭೆ ತಮ್ಲುಕ್ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಿಜಿತ್ ಗಂಗೋಪಾಧ್ಯಾಯ ಕಲ್ಕತ್ತ ಹೈಕೋರ್ಟ್‌ನ ಮೆಟ್ಟಿಲೇರಿದ್ದಾರೆ. ನ್ಯಾಯಮೂರ್ತಿ ಜೈ ಸೆನ್‌ಗುಪ್ತಾ ಅವರ ಪೀಠದ ಎದುರು ಈ ಅರ್ಜಿ ಬಂದಿದ್ದು, ಮಂಗಳವಾರ ಇದನ್ನು ವಿಚಾರಣೆಗೆ ಪರಿಗಣಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಪೊಲೀಸರಿಂದ ಸಂಚು ನಡೆಯುತ್ತಿದ್ದು, ಅವರು ಈ ವಿಷಯದಲ್ಲಿ ಅತಿ ಉತ್ಸಾಹ ತೋರಿಸುತ್ತಿದ್ದಾರೆ ಎಂದು ಗಂಗೋಪಾಧ್ಯಾಯ ಅವರ ವಕೀಲ ರಾಜ್‌ದೀಪ್ ಮಜುಂದಾರ್ ಅವರು ಅರ್ಜಿಯಲ್ಲಿ ಉಲ್ಲೇಖಿಸಿದ್ದು, ಪ್ರಚಾರದಿಂದ ದೂರ ಇರುವಂತೆ ತಡೆಯಲು ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಆರೋಪಿಸಿದ್ದಾರೆ. ಗಂಗೋಪಾಧ್ಯಾಯ ಅವರ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ. ಕಲ್ಕತ್ತ ಹೈಕೋರ್ಟ್ ನ್ಯಾಯಮೂರ್ತಿ ಸ್ಥಾನಕ್ಕೆ ಮಾರ್ಚ್‌ನಲ್ಲಿ ರಾಜೀನಾಮೆ ನೀಡಿದ್ದ ಗಂಗೋಪಾಧ್ಯಾಯ ಅವರು ಬಳಿಕ ಬಿಜೆಪಿ ಸೇರಿ, ಲೋಕಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.