| ಟ್ಯಾಂಕರ್‌ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ: 6 ಮಂದಿ ಸಜೀವ ದಹನ ಅಮರಾವತಿ: ಆಂಧ್ರಪ್ರದೇಶದ ಪಾಲ್ನಾಡು ಜಿಲ್ಲೆಯ ಚಿಲಕಲುರಿಪೇಟ್‌ ಬಳಿ ಖಾಸಗಿ ಬಸ್‌ ಹಾಗೂ ಟಿಪ್ಪರ್‌ ನಡುವೆ ಡಿಕ್ಕಿ ಸಂಭವಿಸಿ ಹೊತ್ತಿಕೊಂಡ ಬೆಂಕಿಗೆ ಆರು ಜನ ಸಜೀವ ದಹನವಾಗಿದ್ದಾರೆ. ಮಂಗಳವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ‘ಈ ಘಟನೆ ಕುರಿತು ನಮಗೆ ಮಾಹಿತಿ ದೊರೆತ ನಂತರ ಆ್ಯಂಬುಲೆನ್ಸ್‌ ಮತ್ತು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದೇವೆ. ನಾವು ಘಟನಾ ಸ್ಥಳ ತಲುಪುವಷ್ಟರಲ್ಲಿ ಬಸ್ ಸುತ್ತ ಜ್ವಾಲೆ ವ್ಯಾಪಿಸಿತ್ತು. ಎರಡೂ ವಾಹನಗಳ ಚಾಲಕರು ಸಾವಿಗೀಡಾಗಿದ್ದು, ಒಟ್ಟು ಆರು ಜನ ಮೃತಪಟ್ಟಿಬಹುದೆಂದು ಅಂದಾಜಿಸಿದ್ದೇವೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪೊಲೀಸರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. | , #. . (:… ../ # | : . :… ../z3iDQ9jMG2 ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.