| ₹ 8,889 ಕೋಟಿ ಚುನಾವಣಾ ಆಯೋಗದ ವಶ ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಸಾಗಿಸುತ್ತಿದ್ದ ನಗದು, ಮಾದಕದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆಗಳು ಸೇರಿದಂತೆ ಇದುವರೆಗೆ ಒಟ್ಟು ₹ 8,889 ಕೋಟಿ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಶನಿವಾರ ತಿಳಿಸಿದೆ. ವಶಪಡಿಸಿಕೊಂಡ ವಸ್ತುಗಳ ಮೊತ್ತದಲ್ಲಿ ಮಾದಕ ದ್ರವ್ಯದ ಪಾಲು ಶೇ 45 ರಷ್ಟು (₹3,959) ಇದೆ ಎಂದು ಅಯೋಗವು ಮಾಹಿತಿ ನೀಡಿದೆ. ಗುಜರಾತ್‌ ಎಟಿಎಸ್‌ ಮತ್ತು ಕರಾವಳಿ ಕಾವಲು ಪಡೆ ಈಚೆಗೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಮೂರು ದಿನಗಳ ಅವಧಿಯಲ್ಲಿ ₹ 892 ಕೋಟಿ ಮೊತ್ತದ ಮಾದಕ ದ್ರವ್ಯ ವಶಪಡಿಸಿಕೊಳ್ಳಲಾಗಿತ್ತು. ₹ 849 ಕೋಟಿ –ನಗದು ₹ 814 ಕೋಟಿ –ವಶಕ್ಕೆ ಪಡೆದ ಮದ್ಯದ ಮೌಲ್ಯ ₹ 3,958 ಕೋಟಿ – ಮಾದವ ದ್ರವ್ಯದ ಮೌಲ್ಯ ₹ 1,260 ಕೋಟಿ – ಬೆಲೆಬಾಳುವ ಲೋಹದ ಮೊತ್ತ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.