ಲೋಕಸಭೆ ಚುನಾವಣೆ | ಆರ್‌ಜೆಡಿ ಪ್ರಣಾಳಿಕೆ: 1 ಕೋಟಿ ಸರ್ಕಾರಿ ಉದ್ಯೋಗದ ಭರವಸೆ ಪಟ್ನಾ: ಬಿಹಾರದಲ್ಲಿ ‘ಮಹಾಘಟಬಂಧನ’ದ ಜೊತೆಗಿರುವ ಆರ್‌ಜೆಡಿಯು ಶನಿವಾರ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ್ದು, ಒಂದು ಕೋಟಿ ಸರ್ಕಾರಿ ಉದ್ಯೋಗದ ಭರವಸೆ ನೀಡಿದೆ. ಬಡ ಕುಟುಂಬಗಳ ಸಹೋದರಿಯರಿಗೆ ರಕ್ಷಾಬಂಧನದಂದು ₹1ಲಕ್ಷ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಹೇಳಲಾಗಿದೆ. ಪ್ರಣಾಳಿಕೆಯನ್ನು (ಪರಿವರ್ತನ ಪತ್ರ) ಬಿಡುಗಡೆಗೊಳಿಸಿ ಮಾತನಾಡಿದ ಆರ್‌ಜೆಡಿ ಮುಖಂಡ ತೇಜಸ್ವಿ ಯಾದವ್‌, ಪಕ್ಷವು ಜನರಿಗೆ 24 ಭರವಸೆಗಳನ್ನು ನೀಡುತ್ತಿದ್ದು, ಅವುಗಳನ್ನು ಈಡೇರಿಸಲಿದೆ ಎಂದರು. ‘ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗುವುದು. ₹500ಕ್ಕೆ ಎಲ್‌ಪಿಜಿ ಸಿಲಿಂಡರ್‌ ನೀಡಲಾಗುವುದು’ ಎಂದೂ ಭರವಸೆ ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.