ಜಮ್ಮು ಮತ್ತು ಕಾಶ್ಮೀರ: ನದಿಯಲ್ಲಿ ದೋಣಿ ಮುಳುಗಿ ಆರು ಜನ ಸಾವು; ಹಲವರು ನಾಪತ್ತೆ ಶ್ರೀನಗರ: ಇಲ್ಲಿನ ಹೊರವಲಯದಲ್ಲಿರುವ ಝೀಲಂ ನದಿಯಲ್ಲಿ ದೋಣಿ ಮುಳುಗಿದ್ದು, ಆರು ಮಂದಿ ಮೃತಪಟ್ಟಿದ್ದು ಕೆಲವರು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. ದೋಣಿಯಲ್ಲಿ 7 ಅಪ್ರಾಪ್ತರು ಮತ್ತು 8 ವಯಸ್ಕರು ಸೇರಿದಂತೆ 15 ಜನರಿದ್ದರು. 3 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 3 ಜನ ಸುರಕ್ಷಿತವಾಗಿದ್ದು ಮನೆಗೆ ಕಳುಹಿಸಲಾಗಿದೆ. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮತ್ತು ಸೇನಾ ತಂಡಗಳು ಸ್ಥಳದಲ್ಲಿದ್ದು ರಕ್ಷಣಾ ಕಾರ್ಯಾಚರಣೆ ಮುಂದರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. # | &: . . : , & ../ ಕಳೆದ ಎರಡು ದಿನಗಳಿಂದ ನಿರಂತರವಾಗಿ ಮಳೆ ಸುರಿಯುತ್ತಿದ್ದು ಝೀಲಂ ಸೇರಿದಂತೆ ಹಲವಾರು ನದಿಗಳ ನೀರಿನ ಮಟ್ಟ ಹೆಚ್ಚಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.