ಕಾಂಗ್ರೆಸ್‌ ಸೇರಿದ ಮಾಜಿ ಸಚಿವ ಎಸ್‌.ವೇಣುಗೋಪಾಲಾಚಾರಿ ಹೈದರಾಬಾದ್: ಬಿಆರ್‌ಎಸ್‌ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಎಸ್‌.ವೇಣುಗೋಪಾಲಾಚಾರಿ ಅವರು ಮಂಗಳವಾರ ಕಾಂಗ್ರೆಸ್‌ ಸೇರಿದರು. ವೇಣುಗೋಪಾಲಾಚಾರಿ ಅವರು ಅವಿಭಜಿತ ಆಂಧ್ರ ಪ್ರದೇಶ ಸರ್ಕಾರದಲ್ಲಿ ಸಚಿವರಾಗಿದ್ದರಲ್ಲದೆ, ಅಟಲ್‌ ಬಿಹಾರಿ ವಾಜಪೇರಿ ಅವರ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದ್ದರು. ನವದೆಹಲಿ ವರದಿ: ಬಿಹಾರದ ವಿಕಾಸ್‌ಶೀಲ ಸ್ವರಾಜ್‌ ಪಕ್ಷದ ಮುಖಂಡ ಪ್ರೇಮ್‌ ಕುಮಾರ್‌ ಚೌಧರಿ ಮತ್ತು ನೇತ್ರತಜ್ಞ ಮನೀಷ್‌ ಕುಮಾರ್‌ ಯಾದವ್‌ ಅವರು ಮಂಗಳವಾರ ಕಾಂಗ್ರೆಸ್‌ಗೆ ಸೇರ್ಪಡೆಗೊಂಡರು. ಎಐಸಿಸಿ ಮುಖ್ಯ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ನ ಬಿಹಾರ ಉಸ್ತುವಾರಿ ಮೋಹನ್‌ ಪ್ರಕಾಶ್ ಮತ್ತು ಬಿಹಾರ ಪ್ರದೇಶ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಅಖಿಲೇಶ್‌ ಪ್ರಸಾದ್‌ ಸಿಂಗ್‌ ಅವರು ಈ ಇಬ್ಬರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಪ್ರೇಮ್‌ ಕುಮಾರ್‌ ಚೌಧರಿ ಅವರು ವಿಕಾಸ್‌ಶೀಲ ಸ್ವರಾಜ್‌ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನಗೊಳಿಸಿದ್ದಾರೆ ಎಂದು ಮೋಹನ್‌ ಪ್ರಕಾಶ್ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.