ಯುಡಿಎಫ್‌ಗೆ ವೆಲ್ಫೇರ್‌ ಪಾರ್ಟಿ ಬೆಂಬಲ ತಿರುವನಂತಪುರ: ಜಮಾತ್‌ ಎ ಇಸ್ಲಾಮೀ ಸಂಘಟನೆಯ ರಾಜಕೀಯ ಅಂಗವಾಗಿರುವ ವೆಲ್ಫೇರ್‌ ಪಾರ್ಟಿ ಆಫ್‌ ಇಂಡಿಯಾವು ಕೇರಳದಲ್ಲಿ ಯುಡಿಎಫ್‌ಗೆ ಬೆಂಬಲ ಸೂಚಿಸಿದೆ. ‘ಸಂಘ ಪರಿವಾರವನ್ನು’ ಅಧಿಕಾರದಿಂದ ದೂರವಿಡಲು ಕಾಂಗ್ರೆಸ್‌ ಪಕ್ಷವು ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದು ಅಗತ್ಯ ಎಂದು ಪಕ್ಷದ ಅಧ್ಯಕ್ಷ ರಜಾಕ್ ಪಾಲೇರಿ ಅವರು ತಿಳಿಸಿದ್ದಾರೆ. ಪಕ್ಷವು 2019ರ ಚುನಾವಣೆಯಲ್ಲೂ ಯುಡಿಎಫ್‌ಗೆ ಬೆಂಬಲ ನೀಡಿತ್ತು. ‘ವೆಲ್ಫೇರ್‌ ಪಾರ್ಟಿಯು ದೇಶದ ಇತರ ಭಾಗಗಳಲ್ಲಿ ಇಂಡಿಯಾ ಮೈತ್ರಿಕೂಟದ ಅಭ್ಯರ್ಥಿಗಳಿಗೆ ಬೆಂಬಲ ನೀಡಲಿದೆ’ ಎಂದು ರಜಾಕ್‌ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.