ಕಾರ್ಮಿಕರ ಭಯದಿಂದ ಪ್ರಧಾನಿ ಪ್ರಚಾರಕ್ಕೆ ಬಂದಿಲ್ಲ: ಪವನ್‌ ಖೇರಾ ಶಿವಸಾಗರ: ಚಹಾ ತೋಟದ ಕಾರ್ಮಿಕರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸದ ಕಾರಣ, ಭಯದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಅಪ್ಪರ್‌ ಅಸ್ಸಾಂ ಪ್ರದೇಶದಲ್ಲಿ ಪ್ರಚಾರಕ್ಕೆ ಬಂದಿಲ್ಲ ಎಂದು ಕಾಂಗ್ರೆಸ್‌ ಮುಖಂಡ ಪವನ್‌ ಖೇರಾ ಬುಧವಾರ ಹೇಳಿದರು. 'ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ ಎಂಬ ಕಾರಣ ನೀಡಿ ರಾಹುಲ್‌ ಗಾಂಧಿ ಅವರ ‘ನ್ಯಾಯ ಯಾತ್ರೆ’ಗೆ ಗುವಾಹಟಿಯಲ್ಲಿ ಅನುಮತಿ ನೀಡಿರಲಿಲ್ಲ. ಈಗ ಮೋದಿ ಅವರು ವಾಹನ ದಟ್ಟಣೆ ಇರುವ ಗುವಾಹಟಿ–ಶಿಲ್ಲಾಂಗ್‌ ರಸ್ತೆಯಲ್ಲಿ ರೋಡ್‌ ಶೋ ನಡೆಸುತ್ತಿದ್ದಾರೆ’ ಎಂದರು. ‘ಅಸ್ಸಾಂನಲ್ಲಿ ಚತುಷ್ಪತ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿ ಪೂರ್ಣಗೊಂಡಿಲ್ಲ. ಚಹಾ ತೋಟದ ಕಾರ್ಮಿಕರ ದಿನಗೂಲಿ ಈಗಲೂ ₹250ಕ್ಕಿಂತ ಹೆಚ್ಚಳವಾಗಿಲ್ಲ’ ಎಂದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.