ಆರ್‌ಜೆಡಿ ಮಾಜಿ ಸಂಸದ ಶೈಲೇಶ್‌ ಕುಮಾರ್‌ ಜೆಡಿಯುಗೆ ಪಟ್ನಾ: ಆರ್‌ಜೆಡಿಯ ಮಾಜಿ ಸಂಸದ ಶೈಲೇಶ್‌ ಕುಮಾರ್‌ ಅವರು ಗುರುವಾರ ಜೆಡಿಯು ಸೇರಿದರು. ಶೈಲೇಶ್‌ ಅವರು 2014ರ ಚುನಾವಣೆಯಲ್ಲಿ ಭಾಗಲ್ಪುರ ಕ್ಷೇತ್ರದಿಂದ ಸ್ಪರ್ಧಿಸಿ, ಬಿಜೆಪಿಯ ಸೈಯದ್ ಶಾನವಾಜ್‌ ಹುಸೇನ್‌ ಅವರನ್ನು ಮಣಿಸಿದ್ದರು. ಶೈಲೇಶ್‌ ಅವರು ಸೇರ್ಪಡೆಯಿಂದ ಭಾಗಲ್ಪುರದಲ್ಲಿ ಜೆಡಿಯುನ ಶಕ್ತಿ ವೃದ್ಧಿಸಿದೆ ಎಂದು ಪಕ್ಷದ ಮುಖಂಡ ರಾಜೀವ್‌ ರಂಜನ್‌ ಸಿಂಗ್‌ ಹೇಳಿದರು. ಇನ್ನೊಬ್ಬ ಆರ್‌ಜೆಡಿ ಮುಖಂಡ, ರಾಜ್ಯಸಭೆಯ ಮಾಜಿ ಸದಸ್ಯ ಅಶ್ಫಾಖ್ ಕರೀಂ ಅವರು ಕಳೆದ ವಾರ ಜೆಡಿಯು ಸೇರಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.