ಜಪಾನ್‌ನಲ್ಲಿ ಪ್ರಬಲ ಭೂಕಂಪ ಟೋಕಿಯೊ: ಆಗ್ನೇಯ ಜಪಾನ್‌ನಲ್ಲಿ 6.6 ಕಂಪನಾಂಕ ತೀವ್ರತೆಯ ಪ್ರಬಲ ಭೂಕಂಪವು ಬುಧವಾರ ರಾತ್ರಿ ಸಂಭವಿಸಿದ್ದು, ಒಂಬತ್ತು ಮಂದಿಗೆ ಚಿಕ್ಕಪುಟ್ಟ ಗಾಯಗಳಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭೂಕಂಪದಿಂದ ನೀರಿನ ಕೊಳವೆಗಳಿಗೆ ಹಾನಿಯುಂಟಾಗಿದೆ ಮತ್ತು ಅಲ್ಲಲ್ಲಿ ಸಣ್ಣ ಪ್ರಮಾಣದ ಭೂಕುಸಿತವೂ ಸಂಭವಿಸಿದೆ ಎಂದು ಅವರು ಹೇಳಿದ್ದಾರೆ. ಶಿಕೋಕು ದ್ವೀಪದ ಪಶ್ಚಿಮ ಕರಾವಳಿ ಬಳಿಯ ಬುಂಗೊ ಕಾಲುವೆ ಹತ್ತಿರ ಸಮುದ್ರ ಮೇಲ್ಮೈಯಿಂದ 50 ಕಿ.ಮೀ. ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಆದರೆ, ಸುನಾಮಿ ಸಂಭವಿಸುವ ಆತಂಕವಿಲ್ಲ ಎಂದು ಜಪಾನ್‌ನ ಹವಾಮಾನ ಇಲಾಖೆ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.