20 ಸಾವಿರ ಲಂಚ: ರೈಲ್ವೆ ಎಂಜಿನಿಯರ್‌ ಬಂಧನ ನವದೆಹಲಿ: ಅಧಿಕಾರಿಯೊಬ್ಬರನ್ನು ಹಾಲಿ ಹುದ್ದೆಯಿಂದ ಬಿಡುಗಡೆಗೊಳಿಸಲು ₹20,000 ಲಂಚ ಪಡೆದ ಆರೋಪದ ಮೇಲೆ ವಾರಾಣಸಿಯಲ್ಲಿ ರೈಲ್ವೆಯ ಹಿರಿಯ ಸೆಕ್ಷನ್‌ ಎಂಜಿನಿಯರ್‌ ಅವರನ್ನು ಸಿಬಿಐ ಬಂಧಿಸಿದೆ ಎಂದು ಗುರುವಾರ ಅಧಿಕಾರಿಗಳು ತಿಳಿಸಿದ್ದಾರೆ. ಈಶಾನ್ಯ ರೈಲ್ವೆಯಲ್ಲಿ ಕೆಲಸ ಮಾಡುತ್ತಿರುವ ಬಂಧಿತ ಆರೋಪಿ ಸಂಜಯ್‌ ಕುಮಾರ್‌ ಅಧಿಕಾರಿಯೊಬ್ಬರನ್ನು ಪ್ರಸ್ತುತ ಹುದ್ದೆಯಿಂದ ಬಿಡುಗಡೆಗೊಳಿಸಲು ₹50,000 ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ಕುಮಾರ್‌ ವಿರುದ್ಧ ಅಧಿಕಾರಿ ಕೇಂದ್ರೀಯ ತನಿಖಾ ದಳಕ್ಕೆ ( ಸಿಬಿಐ) ದೂರು ನೀಡಿದ್ದರು. ಬಳಿಕ ಎಫ್‌ಐಆರ್‌ ದಾಖಲಿಸಿದ ಸಿಬಿಐ, ₹20,000 ಲಂಚ ಪಡೆಯುವಾಗ ಅಧಿಕಾರಿಯನ್ನು ಬಂಧಿಸಿದೆ. ಅಲ್ಲದೆ ಆರೋಪಿಯ ನಿವಾಸಗಳ ಮೇಲೆ ದಾಳಿ ನಡೆಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.