ಗೋವಾ ಪ್ರವಾಸಕ್ಕೆ ಹೋಗಿದ್ದ ಬೆಂಗಳೂರು ವ್ಯಕ್ತಿ ನಾಪತ್ತೆ ಪಣಜಿ: ದೂಧ್‌ಸಾಗರ್ ಜಲಪಾತ ನೋಡಲು ಪ್ರವಾಸಕ್ಕೆ ಬಂದಿದ್ದ ಬೆಂಗಳೂರಿನ 62 ವರ್ಷದ ವ್ಯಕ್ತಿಯು ಕಾಣೆಯಾಗಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಅಬ್ದುಲ್‌ ರಫೀಕ್ ಹಾಗೂ ಅವರ ಪತ್ನಿ ಜೀಪ್‌ ಒಂದನ್ನು ಬಾಡಿಗೆಗೆ ಪಡೆದು, ದಕ್ಷಿಣ ಗೋವಾದಲ್ಲಿ ಇರುವ ಜಲಪಾತ ನೋಡಲು ಹೋಗಿದ್ದರು. ಗುರುವಾರ ಮಧ್ಯಾಹ್ನದಿಂದ ಅಬ್ದುಲ್ ರಫೀಕ್ ಕಾಣೆಯಾಗಿದ್ದಾರೆ ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ. ಜೀಪ್‌ನಲ್ಲಿ ಪ್ರವಾಸ ಮಾಡಿದ ಸಹಪ್ರಯಾಣಿಕರು ಹಾಗೂ ಪೊಲೀಸರು ಹುಡುಕಾಟ ನಡೆಸಿದರೂ ಅಬ್ದುಲ್ ಪತ್ತೆಯಾಗಿಲ್ಲ. ವರ್ಕಾದ ಹೋಟೆಲ್‌ ಒಂದರಲ್ಲಿ ಅವರು ಹಾಗೂ ಅವರ ಪತ್ನಿ ಉಳಿದುಕೊಂಡಿದ್ದರು. ಕೊಲ್ಲಂ ಪೊಲೀಸ್ ಠಾಣೆಯಲ್ಲಿ ಅಬ್ದುಲ್ ಕಾಣೆಯಾಗಿರುವ ಕುರಿತು ದೂರು ದಾಖಲಾಗಿದೆ ಎಂದೂ ಹೇಳಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.