ರಾಜ್‌ ಕುಂದ್ರಾಗೆ ಸೇರಿದ ₹98 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಿದ ಇ.ಡಿ ನವದೆಹಲಿ: ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆಯ ಭಾಗವಾಗಿ ನಟಿ ಶಿಲ್ಪಾ ಶೆಟ್ಟಿ ಪತಿ ರಾಜ್‌ ಕುಂದ್ರಾಗೆ ಸೇರಿದ ಪುಣೆಯಲ್ಲಿರುವ ಬಂಗಲೆ, ಈಕ್ವಿಟಿ ಷೇರುಗಳು ಸೇರಿದಂತೆ ₹98 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಗುರುವಾರ ಜಪ್ತಿ ಮಾಡಿದೆ. ರಾಜ್‌ ಅವರ ಹೆಸರಿನಲ್ಲಿರುವ ಮುಂಬೈನ ಜುಹುನಲ್ಲಿರುವ ವಸತಿ ಫ್ಲಾಟ್ ಮತ್ತು ಪುಣೆಯಲ್ಲಿರುವ ವಸತಿ ಬಂಗಲೆ ಮತ್ತು ಕುಂದ್ರಾ ಅವರ ಹೆಸರಿನಲ್ಲಿರುವ ಈಕ್ವಿಟಿ ಷೇರುಗಳನ್ನು ಜಪ್ತಿ ಮಾಡಲಾಗಿದೆ ಎಂದು ಫೆಡರಲ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ. ಬಿಟ್‌ಕಾಯಿನ್‌ಗಳ ಬಳಕೆಯ ಮೂಲಕ ಹೂಡಿಕೆದಾರರ ಹಣವನ್ನು ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಆಸ್ತಿ ಜಪ್ತಿ ಮಾಡಿದೆ. ಕುಂದ್ರಾ ಅವರು ಇನ್ನೂ 285 ಬಿಟ್‌ಕಾಯಿನ್‌ಗಳನ್ನು ಹೊಂದಿದ್ದಾರೆ, ಅವುಗಳ ಬೆಲೆ ಪ್ರಸ್ತುತ ₹150 ಕೋಟಿಗಿಂತ ಹೆಚ್ಚು ಮೌಲ್ಯದ್ದಾಗಿವೆ ಎಂದು ಇಡಿ ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.