ಜಾರ್ಖಂಡ್ | 1.40 ಕೋಟಿ ಮೌಲ್ಯದ ಅಫೀಮು: ತಂದೆ, ಮಗ ಸೆರೆ ಚತ್ರಾ: ಜಾರ್ಖಂಡ್‌ನ ಚತರಾ ಜಿಲ್ಲೆಯಲ್ಲಿ ₹1.40 ಕೋಟಿ ಬೆಲೆಯ ಅಫೀಮು ಹೊಂದಿದ್ದ ತಂದೆ ಹಾಗೂ ಮಗನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ. ಜಿಲ್ಲೆಯ ಗಿಧೌರ್‌ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಬರ್ಲಿ ತೋಲಾದಲ್ಲಿರು‌ವ ಪ್ರಾಣಿ ಸಾಕಾಣಿಕೆ ಶೆಡ್‌ನಲ್ಲಿ ಶನಿವಾರ ರಾತ್ರಿ 28 ಕೆ.ಜಿ. ಅಫೀಮು ವಶಪಡಿಸಿಕೊಳ್ಳಲಾಗಿದೆ. ಶೆಡ್‌ನ ಮಾಲೀಕ ಮಹೇಂದ್ರ ಡಂಗಿ (50) ಹಾಗೂ ಆತನ ಪುತ್ರ ದೀಪೇಂದ್ರ (28) ಎಂಬುವವರನ್ನು ಬಂಧಿಸಲಾಗಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.