ದೆಹಲಿಯಲ್ಲಿ ದಿಢೀರ್‌ ಹವಾಮಾನ ಬದಲಾವಣೆ ನವದೆಹಲಿ: ದೆಹಲಿಯಲ್ಲಿ ಮಂಗಳವಾರ ಸಂಜೆ ಹಠಾತ್‌ ಆಗಿ ಹವಾಮಾನ ಬದಲಾವಣೆಯಾಗಿದೆ. ಇಡೀ ದಿನ ಅಧಿಕ ತಾಪಮಾನವಿದ್ದು, ಸಂಜೆ ಭಾರಿ ಗಾಳಿ ಬೀಸಿದೆ. ಜೊತೆಗೆ ಕೆಲ ಭಾಗಗಳಲ್ಲಿ ಹಗುರ ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮೊದಲಿಗೆ ದೂಳು ಸಹಿತ ಭಾರಿ ಗಾಳಿ ಎದ್ದಿತ್ತು. ಬಳಿಕ ಗುಡುಗು ಸಹಿತ ಮಳೆ ಬಂದಿದೆ. ಮಳೆ ಸುರಿವಾಗಲೂ ಭಾರಿ ಗಾಳಿ ಬೀಸಿದೆ ಎಂದು ಇಲಾಖೆ ಹೇಳಿದೆ. ಈ ಋತುವಿನಲ್ಲಿ ದೆಹಲಿಯಲ್ಲಿ ಕನಿಷ್ಠ 22.6 ಡಿಗ್ರಿ ಸೆಲ್ಸಿಯಸ್‌, ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಇರುತ್ತದೆ. ಮಂಗಳವಾರದ ಗರಿಷ್ಠ ಉಷ್ಣಾಂಶವು ಸರಾಸರಿಗಿಂತ ಕಡಿಮೆ, ಅಂದರೆ 36.8 ಡಿಗ್ರಿ ಸೆಲ್ಸಿಯಸ್ ಇತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.