ಕೇರಳ | ಸ್ಕೂಟರ್‌ ಕೀ ತಗುಲಿ ಬಿಜೆಪಿ ಅಭ್ಯರ್ಥಿ ಕಣ್ಣಿಗೆ ಗಾಯ ಕೊಲ್ಲಂ: ಕೇರಳದ ಕೊಲ್ಲಂ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ. ಕೃಷ್ಣಕುಮಾರ್‌ ಅವರ ಕಣ್ಣಿಗೆ ಅವರದೇ ಪಕ್ಷದ ಮುಖಂಡರೊಬ್ಬರ ಕೈಯಲ್ಲಿದ್ದ ಸ್ಕೂಟರ್‌ ಕೀ ತಗುಲಿ ಗಾಯವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಚಾರದ ವೇಳೆ ತನ್ನ ಮೇಲೆ ಆಯುಧದಿಂದ ದಾಳಿ ನಡೆದಿದ್ದು, ರಾಜಕೀಯ ವಿರೋಧಿಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಕೃಷ್ಣಕುಮಾರ್‌ ಅವರು ಈ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಈ ಸಂಬಂಧ ಸ್ಥಳೀಯ ಬಿಜೆಪಿ ಮುಖಂಡ ಸನಲ್‌ ಪುತ್ತನ್‌ವಿಳ ಅವರನ್ನು ಪೊಲೀಸರು ಬಂಧಿಸಿ, ಬಳಿಕ ಜಾಮೀನಿನಲ್ಲಿ ಬಿಡುಗಡೆಗೊಳಿಸಿದರು. ಕಣ್ಣಗೆ ಗಾಯವಾಗಿರುವ ಕುರಿತು ಕೃಷ್ಣಕುಮಾರ್‌ ಅವರು ಎಕ್ಸ್‌ ಮಾಧ್ಯಮದಲ್ಲೂ ಮಾಹಿತಿ ಹಂಚಿಕೊಂಡಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.