ಅಜಿತ್‌ ಪವಾರ್‌ ಬಣಕ್ಕೆ ಕಾಂಗ್ರೆಸ್‌ ಮುಖಂಡ ಮುಷ್ತಾಕ್ ಅಂತುಲೆ ಸೇರ್ಪಡೆ ಮುಂಬೈ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಬ್ದುಲ್ ರೆಹಮಾನ್ ಅಂತುಲೆ ಅವರ ಅಳಿಯ ಹಾಗೂ ಕಾಂಗ್ರೆಸ್‌ ಮುಖಂಡ ಮುಷ್ತಾಕ್ ಅಂತುಲೆ ಅವರು ಎನ್‌ಸಿಪಿಯ ಅಜಿತ್‌ ಪವಾರ್‌ ಬಣಕ್ಕೆ ಸೇರ್ಪಡೆಗೊಂಡರು. ಅಂತುಲೆ ಅವರು ಪಕ್ಷ ತೊರೆದಿರುವುದರಿಂದ ಕಾಂಗ್ರೆಸ್‌ ಮತ್ತು ‘ಮಹಾ ವಿಕಾಸ್‌ ಅಘಾಡಿ’ಗೆ ಮಹಾರಾಷ್ಟ್ರದಲ್ಲಿ ಹಿನ್ನಡೆಯಾಗಿದೆ. ‘ಮಹಾರಾಷ್ಟ್ರದ ಅಭಿವೃದ್ಧಿಗಾಗಿ ಎನ್‌ಸಿಪಿಯ ಅಜಿತ್‌ ಪವಾರ್‌ ಬಣಕ್ಕೆ ಸೇರಿದ್ದೇನೆ’ ಎಂದು ಮುಷ್ತಾಕ್ ತಿಳಿಸಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.