ಜೈಸಲ್ಮೇರ್: ರಿಮೋಟ್‌ ನಿಯಂತ್ರಿತ ಐಎಎಫ್‌ ವಿಮಾನ ಪತನ ಜೈಸಲ್ಮೇರ್: ವಾಯುಪಡೆಗೆ ಸೇರಿದ, ರಿಮೋಟ್‌ ಮೂಲಕ ನಿಯಂತ್ರಿಸಲಾಗುತ್ತಿದ್ದ ವಿಮಾನವೊಂದು ಜಿಲ್ಲೆಯ ಪಿತಾಲಾ ಗ್ರಾಮದಲ್ಲಿ ಪತನಗೊಂಡಿದೆ. ತರಬೇತಿ ಹಂತದಲ್ಲಿದ್ದಾಗ ಈ ಅವಘಡ ಸಂಭವಿಸಿದೆ. ಯಾರಿಗೂ ಯಾವುದೇ ಹಾನಿಯಾಗಿಲ್ಲ ಎಂದು ವಾಯುಪಡೆಯು ‘ಎಕ್ಸ್‌’ನಲ್ಲಿ ಮಾಹಿತಿ ಹಂಚಿಕೊಂಡಿದೆ. ಅಪಘಾತದ ಕಾರಣ ತಿಳಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು ತಿಳಿಸಿದೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.