ಉತ್ತರ ಪ್ರದೇಶ | ‘ಜೈ ಶ್ರೀರಾಮ್’ ಉತ್ತರ: ಇಬ್ಬರು ಪ್ರಾಧ್ಯಾಪಕರ ಅಮಾನತು ಜೌನಪುರ: ಹಲವು ಪ್ರಶ್ನೆಗಳಿಗೆ ಉತ್ತರದ ಭಾಗವಾಗಿ ‘ಜೈ ಶ್ರೀರಾಮ್’ ಎಂದು, ಭಾರತ ಕ್ರಿಕೆಟ್ ತಂಡದ ಆಟಗಾರರ ಹೆಸರುಗಳನ್ನು ಬರೆದು ನಾಲ್ಕು ಮಂದಿ ವಿದ್ಯಾರ್ಥಿಗಳು ಶೇಕಡ 56ರಷ್ಟು ಅಂಕಗಳೊಂದಿಗೆ ತೇರ್ಗಡೆ ಆಗಿರುವುದು ಆರ್‌ಟಿಐ ಅಡಿ ಪಡೆದ ಮಾಹಿತಿಯ ಮೂಲಕ ಗೊತ್ತಾಗಿತ್ತು. ಇದಾದ ನಂತರ ಸರ್ಕಾರಿ ವಿಶ್ವವಿದ್ಯಾಲಯವೊಂದರ ಇಬ್ಬರು ಪ್ರಾಧ್ಯಾಪಕರನ್ನು ಅಮಾನತು ಮಾಡಲಾಗಿದೆ. ಡಾ. ಆಶುತೋಷ್ ಗುಪ್ತ ಮತ್ತು ಡಾ. ವಿನಯ್ ವರ್ಮ ಅವರು ತಪ್ಪಾಗಿ ಮೌಲ್ಯಮಾಪನ ನಡೆಸಿರುವ ಕಾರಣ ಅವರನ್ನು ಅಮಾನತು ಮಾಡಲಾಗಿದೆ ಎಂದು ವೀರ್ ಬಹಾದ್ದೂರ್ ಸಿಂಗ್ ಪೂರ್ವಾಂಚಲ ವಿಶ್ವವಿದ್ಯಾಲಯದ ಕುಲಪತಿ ಡಾ. ವಂದನಾ ಸಿಂಗ್ ತಿಳಿಸಿದ್ದಾರೆ. ಮೊದಲ ವರ್ಷದ ನಾಲ್ವರು ವಿದ್ಯಾರ್ಥಿಗಳಿಂದ ಈ ಪ್ರಾಧ್ಯಾಪಕರು ಹಣ ವಸೂಲು ಮಾಡಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಸಿಂಗ್ ಅವರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.