ಬಾಹ್ಯಾಕಾಶ ತಂತ್ರಜ್ಞಾನ: ಖಾಸಗಿ ಕಂಪನಿಗಳ ನೆರವು- ಎಸ್‌. ಸೋಮನಾಥ್ ಬೆಂಗಳೂರು: ಬಾಹ್ಯಾಕಾಶ ತಂತ್ರಜ್ಞಾನ ಸಂಶೋಧನೆಯ ವೇಗ ತೀವ್ರಗೊಳ್ಳಲು ಖಾಸಗಿ ಕ್ಷೇತ್ರದವರು ನೆರವು ನೀಡಲಿದ್ದಾರೆ ಎಂದು ಇಸ್ರೋ ಅಧ್ಯಕ್ಷ ಎಸ್‌. ಸೋಮನಾಥ್ ಅಧಿಕೃತ ಇನ್‌ಸ್ಟಾಗ್ರಾಂ ಸಂವಾದದಲ್ಲಿ ತಿಳಿಸಿದ್ದಾರೆ. ಬಹುತೇಕ ದೇಶಗಳಲ್ಲಿ ಬಾಹ್ಯಾಕಾಶ ತಂತ್ರಜ್ಞಾನ ಕ್ಷೇತ್ರಕ್ಕೆ ‘ಸ್ಪೇಸ್‌ಎಕ್ಸ್‌’ ಎಂಬ ಖಾಸಗಿ ಸಂಸ್ಥೆಯು ಹೆಚ್ಚು ಕೊಡುಗೆ ನೀಡಿದೆ ಎಂದು ಸಂವಾದದಲ್ಲಿ ಶನಿವಾರ ಆಸಕ್ತರೊಬ್ಬರು ಉಲ್ಲೇಖಿಸಿದಾಗ, ಸೋಮನಾಥ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ. ರಾಕೆಟ್‌ ಎಂಜಿನ್‌ಗಳ ತಯಾರಿಕೆಯಲ್ಲಿ ‘ಸ್ಪೇಸ್‌ಎಕ್ಸ್‌’ ಕಂಪನಿಯನ್ನು ಅಮೆರಿಕ ವ್ಯಾಪಕವಾಗಿ ತೊಡಗಿಸಿಕೊಂಡಿದೆ. ಆ ನಡೆಯನ್ನು ಭಾರತವೂ ಮಾನವ ಚಾಲಿತ ವೈಮಾನಿಕ ವಾಹನಗಳ ತಯಾರಿಕೆಯಲ್ಲಿ ಅನುಸರಿಸಲು ಸಾಧ್ಯವಿದೆ ಎಂದು ಅವರು ಪ್ರತಿಪಾದಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.