ಪಂಜಾಬ್: ಮಾಜಿ ಎಡಿಜಿಪಿ ಕಾಂಗ್ರೆಸ್‌ಗೆ ನವದೆಹಲಿ: ಪಂಜಾಬ್‌ನ ಮಾಜಿ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ (ಎಡಿಜಿಪಿ) ಗುರಿಂದರ್‌ ಸಿಂಗ್ ಧಿಲ್ಲೋನ್‌ ಅವರು ತಮ್ಮ ಪತ್ನಿ ಜೊತೆ ಮಂಗಳವಾರ ಇಲ್ಲಿ ಕಾಂಗ್ರೆಸ್‌ ಸೇರಿದರು. ಪಂಜಾಬ್‌ ಪೊಲೀಸ್‌ ಸೇವೆಯಿಂದ ಈಚೆಗಷ್ಟೇ ಸ್ವಯಂ ನಿವೃತ್ತಿಯಾಗಿದ್ದ ಗುರಿಂದರ್‌ ಅವರನ್ನು ಎಐಸಿಸಿ ಪಂಜಾಬ್‌ ಉಸ್ತುವಾರಿ ದೇವೇಂದ್ರ ಯಾದವ್‌ ಅವರು ಪಕ್ಷಕ್ಕೆ ಬರಮಾಡಿಕೊಂಡರು. ‘ಒಬ್ಬ ಪೊಲೀಸ್ ಅಧಿಕಾರಿಯಾಗಿ ಸುಮಾರು ಎರಡು ದಶಕಗಳ ಕಾಲ ನಾನು ನನ್ನ ರಾಜ್ಯದಲ್ಲಿ ಸೇವೆ ಸಲ್ಲಿಸಿದ್ದೇನೆ. ರಾಹುಲ್ ಗಾಂಧಿ ಅವರ ಆಶೀರ್ವಾದದಿಂದ ಇದೀಗ ಕಾಂಗ್ರೆಸ್‌ ಸೇರಿದ್ದೇನೆ’ ಎಂದು ಧಿಲ್ಲೋನ್‌ ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.