ಪೀಯೂಷ್‌ ಗೋಯಲ್ ನಾಮಪತ್ರ ಸಲ್ಲಿಕೆ ಮುಂಬೈ: ಕೇಂದ್ರ ಸಚಿವ, ಮುಂಬೈ ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪೀಯೂಷ್‌ ಗೋಯಲ್‌ ಅವರು ಮಂಗಳವಾರ ನಾಮಪತ್ರ ಸಲ್ಲಿಸಿದರು. ಬಾಂದ್ರಾದಲ್ಲಿ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸುವ ವೇಳೆ ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಜತೆಗಿದ್ದರು. ರಾಜ್ಯಸಭಾ ಸದಸ್ಯರಾಗಿರುವ ಗೋಯಲ್‌ ಅವರು ಲೋಕಸಭೆ ಚುನಾವಣೆ ಕಣಕ್ಕಿಳಿದಿರುವುದು ಇದೇ ಮೊದಲು. ಈ ಕ್ಷೇತ್ರಕ್ಕೆ ಕಾಂಗ್ರೆಸ್‌ ಇನ್ನೂ ತನ್ನ ಅಭ್ಯರ್ಥಿಯನ್ನು ಘೋಷಿಸಿಲ್ಲ. ರವೀಂದ್ರ ವಾಯ್ಕರ್‌ ಕಣಕ್ಕೆ: ಶಿವಸೇನಾ (ಶಿಂದೆ ಬಣ) ಪಕ್ಷವು ಮುಂಬೈ ವಾಯವ್ಯ ಕ್ಷೇತ್ರದಿಂದ ರವೀಂದ್ರ ವಾಯ್ಕರ್‌ ಅವರನ್ನು ಕಣಕ್ಕಿಳಿಸಿದೆ. ಉದ್ಧವ್‌ ಠಾಕ್ರೆಗೆ ಆಪ್ತರಾಗಿದ್ದ ವಾಯ್ಕರ್‌, ಆ ಬಳಿಕ ಶಿಂದೆ ಬಣ ಸೇರಿದ್ದರು. ಅವರು ಇಲ್ಲಿ ಶಿವಸೇನಾ (ಯುಬಿಟಿ) ಅಭ್ಯರ್ಥಿ ಅಮೋಲ್‌ ಕೀರ್ತಿಕರ್‌ ವಿರುದ್ಧ ಪೈಪೋಟಿ ನಡೆಸುವರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.