ಔಟರ್‌ ಮಣಿಪುರ: ಶೇ 81.16 ರಷ್ಟು ಮತದಾನ ಇಂಫಾಲ್‌: ಔಟರ್‌ ಮಣಿಪುರ ಲೋಕಸಭಾ ಕ್ಷೇತ್ರದ ಆರು ಮತಗಟ್ಟೆಗಳಲ್ಲಿ ಮಂಗಳವಾರ ನಡೆದ ಮರುಮತದಾನದಲ್ಲಿ ಶೇ 81.16 ರಷ್ಟು ಮತದಾನ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮತದಾನದ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಎಲ್ಲಾ ರೀತಿಯ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿತ್ತು ಎಂದು ವಿವರಿಸಿದರು. ಏಪ್ರಿಲ್‌ 26ರಂದು ಈ ಮತಗಟ್ಟೆಗಳಲ್ಲಿ ನಡೆದಿದ್ದ ಮತದಾನದ ವೇಳೆ ದುಷ್ಕರ್ಮಿಗಳು ಇವಿಎಂ ಮತ್ತು ವಿವಿಪ್ಯಾಟ್‌ಗಳಿಗೆ ಹಾನಿ ಎಸಗಿದ್ದರು. ಒಂದು ಮತಗಟ್ಟೆಯಲ್ಲಿ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು ಎಂದು ಹೇಳಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.