ಬಾಬಾ ರಾಮದೇವ ಕಂಪನಿಯ ಪರವಾನಗಿ ಅಮಾನತಾದ ಔಷಧಿಗಳ ಪಟ್ಟಿ ಇಂತಿದೆ ನವದೆಹಲಿ: ಯೋಗ ಗುರು ಬಾಬಾ ರಾಮದೇವ ಅವರಿಗೆ ಸೇರಿದ ಔಷಧ ಕಂಪನಿಗಳು ತಯಾರಿಸುವ 14 ಬಗೆಯ ಉತ್ಪನ್ನಗಳ ತಯಾರಿಕೆಗೆ ನೀಡಿರುವ ಪರವಾನಗಿಯನ್ನು ಉತ್ತರಾಖಂಡ ಸರ್ಕಾರವು ಅಮಾನತಿನಲ್ಲಿ ಇರಿಸಿದೆ. ಔಷಧಗಳ ಸಾಮರ್ಥ್ಯದ ಬಗ್ಗೆ ತಪ್ಪು ದಾರಿಗೆ ಎಳೆಯುವ ಜಾಹೀರಾತುಗಳನ್ನು ಮತ್ತೆ ಮತ್ತೆ ಪ್ರಕಟಿಸಿದ್ದಕ್ಕಾಗಿ ಈ ರೀತಿ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ. ಈ ಆದೇಶವು ರಾಮದೇವ ಅವರಿಗೆ ಆಗಿರುವ ಹಿನ್ನಡೆ ಎಂದು ವಿಶ್ಲೇಷಿಸಲಾಗಿದೆ. ರಾಮದೇವ ಅವರು ಈಚಿನ ದಿನಗಳಲ್ಲಿ ಸುಪ್ರೀಂ ಕೋರ್ಟ್‌ನ ಕೋಪಕ್ಕೂ ತುತ್ತಾಗಿದ್ದಾರೆ. ಉತ್ತರಾಖಂಡ ಸರ್ಕಾರವು ಏಪ್ರಿಲ್‌ 15ರಂದು ಈ ಅಮಾನತು ಆದೇಶ ಹೊರಡಿಸಿದೆ. ಅಸ್ತಮಾ, ಶ್ವಾಸನಾಳಗಳ ಒಳಪೊರೆಯ ಉರಿಯೂತ (ಬ್ರಾಂಕೈಟಿಸ್) ಮತ್ತು ಮಧುಮೇಹ ಔಷಧಿಗಳ ತಯಾರಿಕಾ ಪರವಾನಗಿಯನ್ನು ಅಮಾನತು ಮಾಡಲಾಗಿದೆ. ಪರವಾನಗಿ ಅಮಾನತ್ತಾದ 14 ಔಷಧಗಳ ಪಟ್ಟಿ ಇಂತಿದೆ... * ಶ್ವಾಸಾರಿ ಗೋಲ್ಡ್ * ಶ್ವಾಸಾರಿ ವಟಿ * ಬ್ರಾಂಕೋಮ್ * ಶ್ವಾಸಾರಿ ಪ್ರವಾಹಿ * ಶ್ವಾಸಾರಿ ಅವಲೇಹ್ * ಮುಕ್ತಾವತಿ ಎಕ್ಸ್‌ಟ್ರಾ ಪವರ್ * ಲಿಪಿಡೋಮ್ * ಬಿಪಿ ಗ್ರಿಟ್ * ಮಧುಗ್ರಿಟ್ * ಮಧುನಾಶಿನಿವತಿ ಎಕ್ಸ್‌ಟ್ರಾ ಪವರ್ * ಲಿವಾಮೃತ್ ಅಡ್ವಾನ್ಸ್ * ಲಿವೋಗ್ರಿಟ್ * ಐಗ್ರಿಟ್ ಗೋಲ್ಡ್ * ಪತಂಜಲಿ ದೃಷ್ಟಿ ಐ ಡ್ರಾಪ್ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.