ಚಿಕಿತ್ಸೆಗಾಗಿ ದಲೈ ಲಾಮಾ ಅಮೆರಿಕಕ್ಕೆ ಧರ್ಮಶಾಲಾ: ಟಿಬೆಟಿಯನ್ ಧರ್ಮಗುರು ದಲೈ ಲಾಮಾ ಅವರು ಮೊಣಕಾಲು ಚಿಕಿತ್ಸೆಗಾಗಿ ಈ ತಿಂಗಳು ಅಮೆರಿಕಕ್ಕೆ ತೆರಳಲಿದ್ದಾರೆ ಎಂದು ಅವರ ಕಚೇರಿ ಸೋಮವಾರ ತಿಳಿಸಿದೆ. ದಲೈ ಲಾಮಾ ಅವರ ಕಾರ್ಯದರ್ಶಿ ಸೆತೆನ್ ಸಂದುಪ್ ಚೋಕ್ಯಪಾ ಅವರು ಹೇಳಿಕೆ ಬಿಡುಗಡೆ ಮಾಡಿದ್ದು, ‘ಸಾರ್ವಜನಿಕ ಭೇಟಿ ಸೇರಿದಂತೆ ಯಾವುದೇ ಕಾರ್ಯಕ್ರಮವನ್ನು ಜೂನ್ 20ರಿಂದ ಮುಂದಿನ ಸೂಚನೆ ಬರುವವರೆಗೆ ನಿಗದಿಪಡಿಸುವುದಿಲ್ಲ. ದಲೈ ಲಾಮಾ ಅವರು ಧರ್ಮಶಾಲಾಗೆ ಹಿಂದಿರುಗಿದ ನಂತರ, ಚಟುವಟಿಕೆಗಳು ಪುನರಾರಂಭಗೊಳ್ಳುತ್ತವೆ’ ಎಂದು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.