ರಾಜ್‌ಕೋಟ್‌ ಅಗ್ನಿದುರಂತ: ಮತ್ತೊಬ್ಬ ಪ್ರಮುಖ ವ್ಯಕ್ತಿ ಬಂಧನ ರಾಜ್‌ಕೋಟ್‌: ಗುಜರಾತ್‌ನ ರಾಜ್‌ಕೋಟ್‌ ನಗರದ ಟಿಆರ್‌ಪಿ ಗೇಮ್‌ ಜೋನ್‌ನಲ್ಲಿ ಶನಿವಾರ ನಡೆದ ಅಗ್ನಿ ಅನಾಹುತಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಪ್ರಮುಖ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನನ್ನು ದವಲ್‌ ಠಾಕೂರ್‌ ಎಂದು ಗುರುತಿಸಲಾಗಿದೆ. ಈತನ್ನು ರಾಜ್‌ಕೋಟ್‌ ಪೊಲೀಸರು ಭಾನುವಾರವೇ ಬಂಧಿಸಿದ್ದರು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. @ | ://./fDxA2Xiyjy# # # ../ ಈ ಗೇಮ್ ಜೋನ್‌ಗೆ 6 ಮಂದಿ ಪಾಲುದಾರರು ಇದ್ದರು. ಇವರ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಅವರ ವಿರುದ್ದ ‘ಕೊಲ್ಲುವ ಉದ್ದೇಶ ಇಲ್ಲದಿದ್ದರೂ, ಜನರ ಸಾವಿಗೆ ಕಾರಣರಾದ ಆರೋಪ’ ಹೊರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೂ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಈ ದುರಂತದಲ್ಲಿ ಮಕ್ಕಳು ಸೇರಿದಂತೆ 28 ಜನರು ಮೃತಪಟ್ಟಿದ್ದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.