ಮುಂಬೈ ಮೆಟ್ರೊಗೆ ಇದೀಗ ದಶಮಾನೋತ್ಸವದ ಸಂಭ್ರಮ ಮುಂಬೈ: ಮುಂಬೈನ ಮೊದಲ ಮೆಟ್ರೊ ಮಾರ್ಗ ವರ್ಸೋವಾ–ಘಾಟ್‌ಕೋಪರ್ ( ) ಮಾರ್ಗಕ್ಕೆ ಇದೀಗ ದಶಮಾನೋತ್ಸವದ ಸಂಭ್ರಮ. ಸಹಯೋಗದಲ್ಲಿ ಜೂನ್ 8, 2014ರಂದು ಮುಂಬೈನ ಮೊದಲ ಮೆಟ್ರೊ ಲೈನ್ ಆರಂಭವಾಗಿತ್ತು. ಈ ಮಾರ್ಗ ಹತ್ತು ವರ್ಷಗಳಲ್ಲಿ 11 ಲಕ್ಷ ಟ್ರಿಪ್‌ಗಳನ್ನು ಪೂರ್ಣಗೊಳಿಸಿದೆ. ಮುಂಬೈ ಮಹಾನಗರಿ ಜನ ಲೋಕಲ್ ಟ್ರೈನ್‌ಗಳನ್ನು ಹೆಚ್ಚು ನೆಚ್ಚಿಕೊಂಡಿದ್ದರು. ಈ ಮಾರ್ಗ ಆರಂಭವಾದ ಮೇಲೆ ಲೋಕಲ್ ಟ್ರೈನ್‌ಗಳ ಮೇಲಿನ ಒತ್ತಡ ಕಡಿಮೆಯಾಗಿತ್ತು. ಈ ಕುರಿತು ಸಂತಸ ಹಂಚಿಕೊಂಡು ಮಾಹಿತಿ ನೀಡಿರುವ ಮುಂಬೈ ಮೆಟ್ರೊ, ಹತ್ತು ವರ್ಷಗಳಲ್ಲಿ ಈ ಮಾರ್ಗದಲ್ಲಿ 90.70 ಕೋಟಿ ಜನ ಪ್ರಯಾಣಿಸಿದ್ದಾರೆ. ದಶಮಾನೋತ್ಸವವನ್ನು ಮುಂಬೈ ಜನ ಸಂಭ್ರಮಿಸುತ್ತಿದ್ದಾರೆ ಎಂದು ತಿಳಿಸಿದೆ. ಪೂರ್ವ ಮತ್ತು ಪಶ್ಚಿಮ ಉಪನಗರಗಳಿಗೆ ಸಾರಿಗೆ ಸಂಪರ್ಕ ಕಲ್ಪಿಸಲು 10 ವರ್ಷದ ಹಿಂದೆ ವರ್ಸೋವಾ–ಅಂಧೇರಿ–ಘಾತ್‌ಕೋಪರ್ ಮಾರ್ಗ ನಿರ್ಮಾಣವಾಗಿತ್ತು. ಈ ಮಾರ್ಗದಲ್ಲಿ ಒಟ್ಟು 12 ನಿಲ್ದಾಣಗಳಿವೆ. ಸಾಮಾನ್ಯ ದಿನಗಳಲ್ಲಿ ಪ್ರತಿದಿನ 4.5 ಲಕ್ಷ ಪ್ರಯಾಣಿಕರು ಈ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. 10 . ' . # # # ../ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.