2024: ಯಾವುದು ಇಳಿಕೆ, ಯಾವುದು ಏರಿಕೆ? ಬೆಂಗಳೂರು: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಬಜೆಟ್‌ ಮಂಡಿಸಿದ್ದಾರೆ. ಅವರು ಸತತವಾಗಿ ಮಂಡಿಸಿರುವ ಏಳನೇ ಬಜೆಟ್‌ ಇದಾಗಿದೆ. 2024ರ ಫೆಬ್ರುವರಿಯಲ್ಲಿ ಮಂಡಿಸಿದ ಮಧ್ಯಂತರ ಬಜೆಟ್‌ ಸೇರಿ ನಿರ್ಮಲಾ ಅವರು ಈವರೆಗೆ 6 ಬಾರಿ ಬಜೆಟ್‌ ಮಂಡಿಸಿದ್ದಾರೆ. ಸಂಪ್ರದಾಯದಂತೆ ಬಜೆಟ್ ಮಂಡನೆಯ ಒಂದು ದಿನದ ಮೊದಲು ಸಂಸತ್ತಿನಲ್ಲಿ ಆರ್ಥಿಕ ಸಮೀಕ್ಷೆಯ ವರದಿಯನ್ನು ಮಂಡಿಸಲಾಗಿದೆ. ನಿರ್ಮಲಾ ಅವರು ಮಂಡಿಸಿರುವ ಬಜೆಟ್‌ನಲ್ಲಿ ಯಾವುದು ಯಾವುದು ಇಳಿಕೆ, ಯಾವುದು ಏರಿಕೆ? ಎಂಬುದರ ಬಗ್ಗ ಮಾಹಿತಿ ಇಲ್ಲಿದೆ ಇಳಿಕೆ *ಚಿನ್ನ ಬೆಳ್ಳಿ ಮೇಲೆ ಶೇ.6, ಪ್ಲಾಟಿನಂ ಮೇಲೆ ಶೇ.6.5 ಸುಂಕ ಕಡಿತ, ತಾಮ್ರದ ಮೇಲೂ ತೆರಿಗೆ ಕಡಿತ. *ಆದಾಯ ತೆರಿಗೆ ಪದ್ಧತಿ ಮತ್ತಷ್ಟು ಸರಳೀಕರಣ *ವಿದೇಶಿ ಬಟ್ಟೆ, ಚರ್ಮೋತ್ಪನ್ನಗಳು, ಟಿವಿ ಅಗ್ಗವಾಗಲಿದೆ * ಆಮದು ಮೊಬೈಲ್, ಚಾರ್ಜರ್ ಗಳ ಬೆಲೆ ಇಳಿಕೆ *20 ಖನಿಜಗಳ ಮೇಲೆ ಅಬಕಾರಿ ಸುಂಕ ಇಳಿಕೆ *ಮೂರು ಕ್ಯಾನ್ಸರ್ ಔಷಧಿಗಳಿಗೆ ತೆರಿಗೆ ವಿನಾಯಿತಿ (ಕ್ಯಾನ್ಸರ್‌ ಮೂರು ಔಷಧಗಳಿಗೆ ಕಸ್ಟಂ ಸುಂಕದಿಂದ ರಿಯಾಯಿತಿ, ಎಕ್ಸ್ ರೇ ಟ್ಯೂಬ್‌, ಮೊಬೈಲ್ ಫೋನ್, ರಿಲೇಟೆಡ್ ಪ್ರಾಡಕ್ಟ್ಸ್‌ ಇಳಿಕೆ, *ವಿದೇಶಿ ಬಟ್ಟೆ ದರ ಅಗ್ಗ, ತೆರಿಗೆ ಕಡಿತ *ಇಕಾಮರ್ಸ್‌ ಮೇಲಿನ ಟಿಡಿಎಸ್‌ ಶೇ 1ರಿಂದ ಶೇ 0,1ಕ್ಕೆ ಇಳಿಕೆ *ಸ್ಟಾರ್ಟ್‌ಅಪ್‌ ವ್ಯವಸ್ಥೆ: ಏಂಜೆಲ್ ಟ್ಯಾಕ್ಸ್‌ ರದ್ದು ಏರಿಕೆ ಪ್ಲಾಸ್ಟಿಕ್ ಮೇಲಿನ ಆಮದು ಸುಂಕ ಏರಿಕೆ ಸ್ಟೇಟ್ ಸ್ಟ್ಯಾಂಪ್ ಡ್ಯೂಟಿ ಹೆಚ್ಚಳಕ್ಕೆ ರಾಜ್ಯ ಸರ್ಕಾರಗಳಿಗೆ ಅವಕಾಶ ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.