ಕಾಂಗ್ರೆಸ್‌ ತೆಕ್ಕೆಗೆ ಮತ್ತೊಬ್ಬ ಬಿಆರ್‌ಎಸ್‌ ಶಾಸಕ ಹೈದರಾಬಾದ್‌: ಬಿಆರ್‌ಎಸ್‌ ಶಾಸಕ ಅರೆಕಾಪುಡಿ ಗಾಂಧಿ ಅವರು ತೆಲಂಗಾಣ ಮುಖ್ಯಮಂತ್ರಿ ಹಾಗೂ ರಾಜ್ಯ ಘಟಕದ ಅಧ್ಯಕ್ಷ ರೇವಂತ ರೆಡ್ಡಿ ಅವರ ಸಮ್ಮುಖದಲ್ಲಿ ಶನಿವಾರ ಕಾಂಗ್ರೆಸ್‌ ಸೇರಿದರು. ಗಾಂಧಿ ಅವರು ಸೆರಿಲಿಂಗಂಪಲ್ಲಿ ಕ್ಷೇತ್ರದಿಂದ ಚುನಾಯಿತರಾಗಿದ್ದಾರೆ. ಗಾಂಧಿ ಅವರೊಂದಿಗೆ ಬಿಆರ್‌ಎಸ್‌ನ ಹಲವು ಕಾರ್ಪೊರೇಟರ್‌ಗಳೂ ಕಾಂಗ್ರೆಸ್‌ ಸೇರಿದರು. ಬಿಆರ್‌ಎಸ್‌ನ ಇನ್ನಷ್ಟು ಶಾಸಕರು ಕಾಂಗ್ರೆಸ್‌ ಸೇರಲಿದ್ದಾರೆ ಎನ್ನಲಾಗುತ್ತಿದೆ. ಇಲ್ಲಿಯವರೆಗೆ ಬಿಆರ್‌ಎಸ್‌ನ ಒಂಬತ್ತು ಶಾಸಕರು ಆಡಳಿತಾರೂಢ ಕಾಂಗ್ರೆಸ್‌ ಸೇರಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.