ಲೋಕೊ ಪೈಲಟ್‌, ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ಸಮಿತಿ ಅಸ್ತಿತ್ವಕ್ಕೆ ನವದೆಹಲಿ: ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕಾಗಿ ರೈಲ್ವೆ ಮಂಡಳಿ ಉನ್ನತ ಸಮಿತಿಯೊಂದನ್ನು ( - ) ರಚಿಸಿ ಆದೇಶಿಸಿದೆ. ಇದು ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಬಹುದಿನದ ಬೇಡಿಕೆಯಾಗಿತ್ತು. ಮಂಡಳಿ ನಿರ್ಧಾರವನ್ನು ಲೋಕೊಪೈಲಟ್‌ಗಳ ಹಾಗೂ ಗಾರ್ಡ್‌ಗಳ ಸಂಘ ಸ್ವಾಗತಿಸಿದೆ. ಸಮಿತಿಯಲ್ಲಿ ರೈಲ್ವೆಯ ವಿವಿಧ ವಲಯಗಳಿಂದ ನೇಮಿಸಲ್ಪಡುವ (ಕಾರ್ಯಕಾರಿ ನಿರ್ದೇಶಕರು) ಐವರು ಸದಸ್ಯರಿರುತ್ತಾರೆ. ಜುಲೈ 11ರಂದು ಈ ನಿರ್ಧಾರ ಹೊರ ಬಿದ್ದಿದ್ದು ಸಮಿತಿ ಅಸ್ತಿತ್ವಕ್ಕೆ ಬಂದಿದೆ. ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಸೇವಾ ದಕ್ಷತೆ ಸುಧಾರಣೆ, ವೇತನ, ಪರಿಹಾರಗಳು ಸೇರಿದಂತೆ ಇನ್ನಿತರ ಬೇಡಿಕೆಗಳ ಮೇಲೆ ಈ ಸಮಿತಿ ಅಧ್ಯಯನ ನಡೆಸಿ ವರದಿಗಳನ್ನು ಸಲ್ಲಿಸಲಿದೆ. ಈ ಮೊದಲು ಲೋಕೊ ಪೈಲಟ್‌ಗಳ ಹಾಗೂ ಗಾರ್ಡ್‌ಗಳ ಕುಂದುಕೊರತೆ ಪರಿಹಾರಕ್ಕೆ ರೈಲ್ವೆಯಲ್ಲಿ ಪ್ರತ್ಯೇಕ ಮಂಡಳಿ ಅಥವಾ ಸಮಿತಿ ಇರಲಿಲ್ಲ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.