50 ವರ್ಷಗಳ ಹಿಂದೆ: ಅಗತ್ಯವಿದ್ದರೆ ಮಾತ್ರ ಕಬ್ಬಿಣ, ಸಿಮೆಂಟ್‌ ಸರಬರಾಜು ಅಗತ್ಯವಿದ್ದರೆ ಮಾತ್ರ ಕಬ್ಬಿಣ,ಸಿಮೆಂಟ್‌ ಸರಬರಾಜು ಬೆಂಗಳೂರು, ಜುಲೈ 15– ಇನ್ನು ಮೇಲೆ ಸರ್ಕಾರ ಅಗತ್ಯವೆಂದು ಪರಿಗಣಿಸುವ ನಿರ್ಮಾಣ ಕಾರ್ಯಗಳಿಗೆ ಮಾತ್ರ (ಮನೆಗಳೂ ಸೇರಿ) ಸಿಮೆಂಟ್‌ ಮತ್ತು ಕಬ್ಬಿಣ ಸರಬರಾಜು. ಅನಗತ್ಯವಾದ ಕಟ್ಟಡಗಳಿಗೆ ಈ ಎರಡು ವಸ್ತುಗಳನ್ನು ಒದಗಿಸಬಾರದೆಂದು ಸದ್ಯದಲ್ಲೇ ಕೇಂದ್ರ ಸರ್ಕಾರ ಆಜ್ಞೆ ಹೊರಡಿಸಲಿದೆ. ದುರ್ಬಲ ವರ್ಗದವರಿಗಾಗಿ ನಗರಾಭಿವೃದ್ಧಿ ಮಂಡಳಿ ಫ್ಲಾಟ್‌ಗಳನ್ನು ನಿರ್ಮಿಸುವ ಯೋಜನೆಯ ಶಂಕುಸ್ಥಾಪನೆಯನ್ನು ನೆರವೇರಿಸಿದ ಮುಖ್ಯಮಂತ್ರಿ ಶ್ರೀ ಅರಸು ಕೇಂದ್ರ ಈ ರೀತಿಯ ಆಜ್ಞೆ ಹೊರಡಿಸುವ ಬಗ್ಗೆ ಸೂಚನೆ ಇತ್ತರು. ಸಿಮೆಂಟ್‌ ಹಾಗೂ ಕಬ್ಬಿಣದ ಅಭಾವ ತಪ್ಪಿಸುವುದು ಹಾಗೂ ಅವುಗಳ ಬೆಲೆ ಮೇಲೆ ಹತೋಟಿ ತರುವುದು ಈ ನಿರ್ಧಾರದ ಉದ್ದೇಶವೆಂದು ಮುಖ್ಯಮಂತ್ರಿ ವಿವರಿಸಿದರು. ‘ಒಂದು ಸಂಸಾರಕ್ಕೆ 15– 20 ಚದರದ ಮನೆ ಸಾಕು. ಆದರೆ 70 ಚದರ ಕಟ್ತಾರೆ. ಇದನ್ನು ತಪ್ಪಿಸಬೇಕು’ ಎಂದು ಅನಗತ್ಯವಾದ ನಿರ್ಮಾಣ ಕಾರ್ಯದ ಕುರಿತು ನಿರ್ದೇಶವೊಂದನ್ನು ನೀಡಿದರು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.