ಪ್ರವಾಸಕ್ಕೆ ಹೋಗಿದ್ದ ಇಬ್ಬರು ಗೋವಾ ಸಮುದ್ರದಲ್ಲಿ ಮುಳುಗಿ ಸಾವು ಪಣಜಿ: ‍ಪ್ರವಾಸಕ್ಕೆ ಹೋಗಿದ್ದ ಇಬ್ಬರು ಸಮುದ್ರದಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶುಕ್ರವಾರ ಪಣಜಿ ಬಳಿಯ ಕಾಂಡೊಲಿಮ್ ಬೀಚ್‌ನಲ್ಲಿ ಸಂಭವಿಸಿದೆ. ಮೃತರನ್ನು ಮುಂಬೈ ಮೂಲದ ಕಲ್ಪನಾ ಪಾರೇಖ್ (68) ಹಾಗೂ ಪ್ರಕಾಶ್ ಡೋಶಿ (73) ಎಂದು ಗುರುತಿಸಲಾಗಿದೆ. ಪ್ರಕಾಶ್ ಅವರ ಪತ್ನಿ ಹರ್ಷಿತಾ ಡೋಶಿ ಅವರು (63) ಪ್ರಾಣಾಪಾಯದಿಂದ ಪಾರಾಗಿದ್ದು ಗೋವಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮುಳುಗುತ್ತಿದ್ದ ಹರ್ಷಿತಾ ಅವರನ್ನು ರಕ್ಷಿಸಲಾಗಿತ್ತು. ಪ್ರಕಾಶ್ ಹಾಗೂ 14 ಜನರ ತಂಡ ಶುಕ್ರವಾರ ಗೋವಾ ಪ್ರವಾಸ ಕೈಗೊಂಡಿತ್ತು. ಬೆಳಿಗ್ಗೆ 11 ಗಂಟೆ ಸುಮಾರು ಸಮುದ್ರ ತೀರದಲ್ಲಿ ಆಟವಾಡುವಾಗ ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರು ಮೃತರಾದರು ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.