ದೆಹಲಿ ಹೈಕೋರ್ಟ್ ಆದೇಶದ ಬೆನ್ನಲ್ಲೇ ಎಎಪಿ ನೂತನ ಕಚೇರಿಗೆ ಜಾಗ ಹಂಚಿದ ಕೇಂದ್ರ ನವದೆಹಲಿ: ದೆಹಲಿ ಹೈಕೋರ್ಟ್‌ ಆದೇಶದ ಬೆನ್ನಲ್ಲೇ ಪಕ್ಷದ ನೂತನ ಕಚೇರಿ ನಿರ್ಮಾಣಕ್ಕೆ ಲುಟ್ಯೆನ್ಸ್‌ ಪ್ರದೇಶದಲ್ಲಿ ಸ್ಥಳ ಹಂಚಿಕೆಯಾಗಿದೆ ಎಂದು ಎಎಪಿ ಮೂಲಗಳು ಗುರುವಾರ ತಿಳಿಸಿವೆ. ಎಎಪಿಯ ನೂತನ ಕಚೇರಿಯು ಪಂಡಿತ್‌ ರವಿ ಶಂಕರ್‌ ಶುಕ್ಲಾ ಲೇನ್‌ನಲ್ಲಿರುವ ಕಟ್ಟಡ ಸಂಖ್ಯೆ 1ರಲ್ಲಿದೆ ಎಂದು ಹೇಳಿವೆ. ಎಎಪಿ ಕಚೇರಿಯು ಈ ಮೊದಲು ರೋಸ್‌ ಅವೆನ್ಯೂ ಪ್ರದೇಶದಲ್ಲಿತ್ತು. ದೆಹಲಿ ನ್ಯಾಯಾಲಯವು, ರಾಷ್ಟ್ರೀಯ ಪಕ್ಷ ಸ್ಥಾನಮಾನಕ್ಕೆ ಅನುಗುಣವಾಗಿ ಎಎಪಿಗೆ ಕಚೇರಿ ಜಾಗ ಹಂಚಿಕೆ ಮಾಡಲು ಕೇಂದ್ರ ಸರ್ಕಾರಕ್ಕೆ ಸಮಯ ನೀಡಿತ್ತು. ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.